Wednesday, July 29, 2026

BDA Apartments

Home Crime ತಿಹಾರ್ ಜೈಲಿನಲ್ಲಿ ನಿರ್ಭಯ ಅತ್ಯಾಚಾರಿಗಳಿಗೆ ಸಿದ್ಧವಾಗಿ ‘ನೇಣು ಕುಣಿಕೆ’

ತಿಹಾರ್ ಜೈಲಿನಲ್ಲಿ ನಿರ್ಭಯ ಅತ್ಯಾಚಾರಿಗಳಿಗೆ ಸಿದ್ಧವಾಗಿ ‘ನೇಣು ಕುಣಿಕೆ’

ನವದೆಹಲಿ, ಜನವರಿ 12, 2019 (www.justkannada.in): ನಿರ್ಭಯ ಅತ್ಯಾಚಾರಿಗಳನ್ನು ಜನವರಿ 22 ರ ಬೆಳಿಗ್ಗೆ ಏಳು ಗಂಟೆಗೆ ಗಲ್ಲಿಗೇರಿಸಲಾಗುವುದು. ಇದಕ್ಕಾಗಿ ಹಗಲು ರಾತ್ರಿ ಸಿದ್ಧತೆಗಳು ನಡೆಯುತ್ತಿವೆ.

ತಿಹಾರ್ ಜೈಲಿನ ಡೈರೆಕ್ಟರೇಟ್ ಜನರಲ್ ಯುಪಿ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅಪರಾಧಿಗಳ ಕೊರಳಿಗೆ ನೇಣು ಬಿಗಿಯಲಿರುವ ಪವನ್ ಎರಡು ದಿನಗಳ ಮೊದಲು ದೆಹಲಿಗೆ ಬರಲಿದ್ದಾರೆ.

ಜನವರಿ 20ಕ್ಕೆ ಪವನ್ ದೆಹಲಿ ತಲುಪುವ ಸಾಧ್ಯತೆಯಿದೆ. ಡೆತ್ ವಾರಂಟ್ ಕಾರ್ಯಗತಗೊಳಿಸಲು ಜೈಲು ಆಡಳಿತವು ಮಾಡಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆಯಂತೆ. ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ಗಲ್ಲಿಗೇರಿಸುವ ಗದ್ದೆಯನ್ನು ಹೊಸದಾಗಿ ಮಾಡಲಾಗಿದೆ.

ಗಲ್ಲಿಗೇರಿಸುವ ಹಳೆಯ ನೆಲಮಾಳಿಗೆಯನ್ನು ಹೊಸದಾಗಿ ಸಿದ್ಧಪಡಿಸಲಾಗಿದೆ. ತಿಹಾರ್ ಜೈಲಿನಲ್ಲಿ ಈವರೆಗೆ ಕೇವಲ ಇಬ್ಬರನ್ನು ಒಟ್ಟಿಗೆ ಗಲ್ಲಿಗೇರಿಸಲಾಗಿದೆ. ಹಗ್ಗ ಸಿದ್ಧವಾಗಿದೆ. ಮರಣ ದಂಡನೆ ವೇಳೆ ಯಾರೆಲ್ಲ ಉಪಸ್ಥಿತರಿರಬೇಕೆಂಬ ಪಟ್ಟಿ ಸಿದ್ಧವಾಗಿದೆ.