ಈ ಬಾರಿ ಕಾಂಗ್ರೆಸ್ ಗೆ 40ರಿಂದ 45 ಸೀಟ್ ಬಂದ್ರೆ ಹೆಚ್ಚು- ಪ್ರಜಾಧ್ವನಿ ಬಸ್ ಯಾತ್ರೆ ಬಗ್ಗೆ ಸಚಿವ ಅಶ‍್ವಥ್ ನಾರಾಯಣ್ ಟೀಕೆ

ಬೆಂಗಳೂರು,ಜನವರಿ,13,2023(www.justkannada.in): ಕಾಂಗ್ರೆಸ್  ನಡೆಸುತ್ತಿರುವ  ಪ್ರಜಾಧ್ವನಿ ಬಸ್ ಯಾತ್ರೆ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ‍್ವಥ್ ನಾರಾಯಣ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್,  ಕಾಂಗ್ರೆಸ್ ಪ್ರಜಾಧ್ವನಿಯನ್ನ ಯಾವತ್ತು ಗೌರವಿಸಿಲ್ಲ. ಮಹಾದಾಯಿ ಯೋಜನೆ ವಿವಾದ ಬಗೆಹರಿಸಲಿಲ್ಲ. ಈಗ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಡಿಪಿಆರ್ ಆಗಿದೆ. ಕಾಂಗ್ರೆಸ್  ಬಸ್ ಯಾತ್ರೆಯಲ್ಲಿ ಎಷ್ಟು ಸೀಟ್ ಇದೆ ನೋಡಿಕೊಳ್ಳಲಿ. ಈ ಬಾರಿ ಕಾಂಗ್ರೆಸ್ 40 ರಿಂದ 45 ಸೀಟ್ ಬಂದ್ರೆ ಹೆಚ್ಚು ಎಂದು ವಾಗ್ದಾಳಿ ನಡೆಸಿದರು.

Key words: Minister- Ashwath Narayan- criticizes -Prajadhwani -Bus Yatra – Co

ngress