ಕಲ್ಬುರ್ಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಕಣ್ಮನ ಸೆಳೆದ ಕಲಾ ತಂಡಗಳ ಪ್ರದರ್ಶನ….   

ಕಲಬುರಗಿ,ಫೆ,5,2020(www.justkannada.in): ತೊಗರಿ ಕಣಜ ಕಲ್ಬುರ್ಗಿಯಲ್ಲಿ ಕನ್ನಡ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಶರಣರನಾಡಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಸವಿಯಲು ನಾನಾ ಭಾಗಗಳಿಂದ ಜನರು ಆಗಮಿಸಿದ್ದಾರೆ.

ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  ನಡೆಯುತ್ತಿದ್ದು,  ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಗೋವಿಂದ  ಎಂ.ಕಾರಜೋಳ ಅವರು ಸಮ್ಮೇಳನದ ರಾಷ್ಟ್ರಧ್ವಜವನ್ನು  ನೇರವೆರಿಸಿಕೊಟ್ಟರು. ಇದೆ ಸಂದರ್ಭದಲ್ಲಿ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ಯನ ಅಧ್ಯಕ್ಷರಾದ ನಾಡೋಕ ಡಾ.ಮನು ಬಳಿಗಾರ ನೆರವೆರಿಸಿದ್ದಾರೆ. ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಮಾಡಿದರು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರಧ್ವಜವನ್ನು ನೇರವೆರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಶರಣ ನಾಡಿನಲ್ಲಿ ನಡೆಯುವ ಸಮ್ಮೇಳನವು ಐತಿಹಾಸಿಕ ಸಮ್ಮೇಳನವಾಗಿದೆ. ಸಮ್ಮೇಳನದಲ್ಲಿ ಅತಿ ಹೆಚ್ಚು  ನೋಂದಣಿಯಾಗಿರುವುದು ಎಂದರೆ ಇದೆ ಅಂತನೆ ಹೇಳಬಹುದಾಗಿದೆ. ಕನ್ನಡ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಕೆಲಸವನ್ನು ನಾವು ಮಾಡ್ಬೇಕು. ಪಟ್ಟಣ ಪ್ರದೇಶದಲ್ಲಿ ಇಂಗ್ಲೀಷನ ಪ್ರಭಾವ ಜಾಸ್ತಿಯಾಗಿದೆ. ಇಂತಹ ಸಮ್ಮೇಳನದ ಮೂಲಕ ಕನ್ನಡವನ್ನು ಉಳಿಸುವಂತಹ ಕೆಲಸ ಆಗ್ಬೇಕು ಎಂದರು.

ಸಮ್ಮೇಳನ ಅಧ್ಯಕ್ಷರ ಮೆರವಣಿಗೆ: ಕಣ್ಮನ ಸೆಳದ 60ಕ್ಕೂ ಹೆಚ್ಚು ಕಲಾ ತಂಡಗಳ ಪ್ರದರ್ಶನ.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಇಂದು ಎಸ್.ಎಮ್ ಪಂಡಿತ್ ರಂಗಮಂದಿರದಿಂದ ಆರಂಭವಾಗಿ  ಅನ್ನಪೂರ್ಣ ಕ್ರಾಸ್. ಬಸವೇಶ್ವರ ಆಸ್ಪತ್ರೆ. ಒಕಳಿ ಕ್ಯಾಂಪ್ ಮಾರ್ಗವಾಗಿ ಕಲಬುರಗಿ ವಿಶ್ವವಿದ್ಯಾಲಯದಲ್ಲಿರುವ ಮುಖ್ಯ ವೇದಿಕೆವರೆಗೆ  ನಡೆಯಿತು.

ಈ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ 60 ಕ್ಕೂ ಹೆಚ್ಚು ಕಲಾ ತಂಡಗಳಾದ ಡೊಳ್ಳು ಕುಣಿತ. ಹಲಿಗೆ ವಾದನ. ದೊಡ್ಡಾಟ ಕುಣಿತ. ಕರಡಿ ಮಜಲು ಮತ್ತು ಚಮವಾದ್ಯ. ಲಂಬಾಣಿ ಕುಣಿತ. ಪುರವಂತಿಕೆ. ರಣಕಹಳೆ. ಗೊಂಬೆ ಕುಣಿತ. ಪೋತರಾಜ ಕುಣಿತ. ಭಜನಾ ಮಂಡಳಿ. ಕರಡಿ ಕುಣಿತ. ಗೊಂಬೆ ಕುಣಿತ. ಮಹಿಳಾ ವೀರ ಗಾಸೆ. ಸಂಬಳ ವಾದ್ಯ. ಮೋಜಿನ ಕುಣಿತ. ವೀರಭದ್ರ ಕುಣಿತ ಹೀಗೆ ವಿವಿಧ ಕಲಾ ಪ್ರಕಾರದ ತಂಡಗಳು ಈ ಭಾಗವಹಿಸಿ ನೋಡುಗರ ಕಣ್ಮನ ಸೆಳೆದವು.

ಈ ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಜಿಲ್ಲೆಯ ಶಾಸಕ ಜನಪ್ರತಿನಿಧಿಗಳು ಭಾಗವಹಿಸಿದ್ದರು.

Key words: 85th All India Kannada Literary Conference -n Kalburgi- art teams -presidential parade