ವಿದ್ಯಾರ್ಥಿಗಳ ಮೇಲೆಯೇ ಬಸ್ ಚಲಾಯಿಸಲು ಯತ್ನಿಸಿದ್ದ ಚಾಲಕ ಸಸ್ಪೆಂಡ್…

0
390

ಬೆಳಗಾವಿ,ಸೆ,25,2019(www.justkannada.in): ವಿದ್ಯಾರ್ಥಿಗಳ ಮೇಲೆಯೇ ಬಸ್ ಚಲಾಯಿಸಲು ಯತ್ನಿಸಿದ್ದ ಬಸ್ ಚಾಲಕನೋರ್ವನನ್ನ ಅಮಾನತು ಮಾಡಲಾಗಿದೆ.

ದಾಂಡೆಲಿ ಘಟಕದ ಎ.ಎಸ್.ಎಫ್ ಶೇಖ್  ಸಸ್ಪೆಂಡ್ ಆದ ಬಸ್ ಚಾಲಕ. ಖಾನಾಪುರ ತಾಲೂಕಿನ ಬೇಕವಾಡ ಕ್ರಾಸ್ ನಲ್ಲಿ ಈ ಘಟನೆ ನಡೆದಿತ್ತು. ವಿದ್ಯಾರ್ಥಿಗಳು ಎಂದಿನಂತೆ ನಿನ್ನೆ  ನಂದಗಡ ಮತ್ತು ಖಾನಾಪುರದ ವಿವಿಧ ಕಾಲೇಜುಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತ ಬೇಕವಾಡ ಬಸ್‌ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ  ಹಳಿಯಾಳದಿಂದ ಬೆಳಗಾವಿಗೆ ತೆರಳುತ್ತಿದ್ದ ಬಸ್‌ಗೆ ಕೈ ತೋರಿಸಿದ್ದರು.

ಶಾಲಾ-ಕಾಲೇಜಿಗೆ ಹೊಗಲು ಬಸ್ ಇಲ್ಲದೇ ಪರದಾಡುತ್ತಿದ್ದ ವಿದ್ಯಾರ್ಥಿಗಳು ಬಸ್ ನಿಲ್ಲಿಸುವಂತೆ ಕೈ ಮಾಡಿದ್ದರೂ  ಚಾಲಕ ಬಸ್ ನಿಲ್ಲಿಸದೇ ವಿದ್ಯಾರ್ಥಿಗಳ ಮೇಲೆಯೇ ಬಸ್ ಚಲಾಯಿಸಲು  ಯತ್ನಿಸಿದ್ದನು ಎನ್ನಲಾಗಿದೆ.

ಇದೀಗ ಬಸ್ ಚಾಲಕ ಎ.ಎಸ್.ಎಫ್ ಶೇಖ್ ನನ್ನ ಧಾರವಾಡದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

Key words: Driver -suspended – attempting – run over- student