ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು…

ತುಮಕೂರು,ಸೆ,25,2019(www.justkannada.in): ಹಲವು ದಿನಗಳಿಂದ ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದು ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬುರುಗನಹಳ್ಳಿ ಸುತ್ತಮುತ್ತಲಿನ  ಗ್ರಾಮದಲ್ಲಿ ಚಿರತೆ ಜಾನುವಾರು ಮತ್ತು ಕುರಿ ಮೇಕೆಗಳ ಮೇಲೆ ದಾಳಿ ನಡೆಸಿ ತಿಂದಿತ್ತು. ಇದರಿಂದಾಗಿ ಹಲವು ದಿನಗಳಿಂದ ಗ್ರಾಮಸ್ಥರು ರೈತರು ಕಂಗಾಲಾಗಿದ್ದರು.

ಸೋಮವಾರ ರಾತ್ರಿ ಒಂದು ಚಿರತೆ  ಮಂಗಳವಾರ ರಾತ್ರಿ ಮತ್ತೋಂದು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದದ್ದು  ಇದ್ದರಿಂದ ಸುತ್ತ ಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಸೆರೆಯಿಂದ ಸದ್ಯ ಗ್ರಾಮಸ್ಥರಲ್ಲಿದ್ದ ಆತಂಕ ದೂರವಾಗಿದೆ.

Key words: tumakur- Leopard-bone-forest department-villager