ಹೊಸ ಆಲೋಚನೆಗಳನ್ನು ಕೆರಿಯರ್ ಹಬ್ ಜೊತೆ ಹಂಚಿಕೊಳ್ಳಿ: ಪ್ರೊ. ಜಿ.ಹೇಮಂತ್ ಕುಮಾರ್ ಸಲಹೆ.

ಮೈಸೂರು,ಜೂನ್,27,2022(www.justkannada.in):  ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆ, ಐಡಿಯಾಗಳನ್ನು ವಿವಿಯ ಕೆರಿಯರ್ ಹಬ್‌ ನೊಂದಿಗೆ ಹಂಚಿಕೊಳ್ಳಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ವಿಜ್ಞಾನ ಹಬ್ಬ ಯುರೇಕಾ 2022 ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯುವರಾಜ ಕಾಲೇಜು ಕರ್ನಾಟಕದ ಬೆಸ್ಟ್ ಕಾಲೇಜು. ಇಲ್ಲಿ ಓದಲು ಪುಣ್ಯ ಮಾಡಿರಬೇಕು. 1914ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿ ಶುರು ಮಾಡಲು ಚಿಂತನೆ ಮಾಡಿದರು. ಆಗ ಮದ್ರಾಸ್ ವಿವಿ ಸಹಯೋಗವಿತ್ತು. ಅಂತಿಮವಾಗಿ 1916ರಲ್ಲಿ ಮೈಸೂರು ವಿವಿ ಆರಂಭವಾಯಿತು. ಹಾಗೆ ಯುವರಾಜ ಕಾಲೇಜು ಕೂಡ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ. ಪ್ರೊ. ನಂಜುಂಡಯ್ಯ ಅವರು ಈ ವಿವಿಯ ಮೊದಲ ಕುಲಪತಿ ಆಗಿದ್ದರು. ಇವರು ವಿವೇಕಾನಂದರ ಸಹಪಾಠಿ ಕೂಡ ಆಗಿದ್ದರು. ಸರ್‌ ಎಂವಿಗೆ ಪಾಠ ಮಾಡಿದ ಶಿಕ್ಷಕರು ಈ ಕಾಲೇಜಿನಲ್ಲಿ ಬೋಧನೆ ಮಾಡಿದ್ದಾರೆ. ಆಗ ವಿಜ್ಞಾನ ಓದಲು ಈಗಿನಷ್ಟು ಕಾಲೇಜುಗಳು ಇರಲಿಲ್ಲ. ಕೇವಲ 4 ಕಾಲೇಜು ಮಾತ್ರ ಇತ್ತು. ಯುವರಾಜ, ಶಾರದವಿಲಾಸ, ಸೆಂಟ್ ಫಿಲೋಮಿನಾ ಹಾಗೂ ಜೆಎಸ್‌ಎಸ್. 2005 ಈ ಕಾಲೇಜು ಸ್ವಾಯತ್ತತೆ ಪಡೆದುಕೊಂಡಿತು. ಪ್ರಸ್ತುತ 4 ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಅಂಕದ ಜೊತೆ ವಿದ್ಯಾರ್ಥಿಗಳು ಹೊಸ ಹೊಸ ಆಲೋಚನೆ ಮಾಡಬೇಕು. ಮೈಸೂರು ವಿವಿಯ ಕೆರಿಯರ್ ಹಬ್ ಇದೆ. ನಿಮ್ಮ ಆಲೋಚನೆ ಏನೇ ಇದ್ದರೂ ಅಲ್ಲಿ ಹಂಚಿಕೊಳ್ಳಬಹುದು. ಪ್ರಕೃತಿಯಲ್ಲಿ ಇರುವುದನ್ನು ವಿಭಿನ್ನ ಆಲೋಚನೆ ಸಂಶೋಧನೆ ಮಾಡಿ. ನಿಮ್ಮ ಆಲೋಚನೆಯನ್ನು ಹೇಗೆ ಸಂಶೋಧನೆ ಮಾಡಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಪ್ರತಿ ವರ್ಷ ಯುವರಾಜ ಕಾಲೇಜಿನಿಂದ ಸಾವಿರ ಜನ ಹೊರಗೆ ಹೋಗುತ್ತಾರೆ. ಅವರೆಲ್ಲ ಉತ್ತಮ ಸಂಶೋಧಕರು ಹಾಗೂ ವಿಜ್ಞಾನಿಗಳು ಆಗಬೇಕು. ಸದ್ಯ ಎನ್‌ ಇಪಿ ಶುರುವಾಗಿದೆ. ಅಂತರ ಶಿಸ್ತೀಯ ಕೋರ್ಸ್ ಗಳು ಇರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮ ಸಂಯೋಜಕರಾದ ಡಾ.ರೂಬಿ ಸೆಲೆಸ್ಟಿನಾ ಮಾತನಾಡಿ, 2013ರಲ್ಲಿ ಮೊದಲ ಬಾರಿಗೆ ವಿಜ್ಞಾನ ಹಬ್ಬವಾದ ಯುರೇಕಾ ಶುರುವಾಯಿತು. ವಿದ್ಯಾರ್ಥಿಗಳೇ ಇಂತಹ ಕಾರ್ಯಕ್ರಮ ಹುಟ್ಟಲು ಕಾರಣ. ಇದು ಅವರದೇ ಆಲೋಚನೆ. ಸಣ್ಣ ಮಟ್ಟದಲ್ಲಿ ಶುರುವಾದ ಈ ಅಂತರ್ ಕಾಲೇಜು ಕಾರ್ಯಕ್ರಮ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವಿಜ್ಞಾನ ನಾನಾ ಒಳಹುಗಳನ್ನು ಅರ್ಥ ಮಾಡಿಕೊಳ್ಳಲು ಯುರೇಕಾ ಸಹಕಾರಿಯಾಗಿದೆ. ವಿಜ್ಞಾನ-ಕಲೆ-ಸಾಂಸ್ಕೃತಿಕತೆಯ ಹೂರಣವೇ ಯುರೇಕಾ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎನ್.ಯಶೋಧ,  ಸೇರಿದಂತೆ ಇತರರು ಇದ್ದರು.

Key words: Share -new ideas –with- Career Hub-mysore university-VC-Pro. G. Hemanth Kumar

ENGLISH SUMMARY…

Prof. G.Hemanth Kumar asks students to share new thoughts and ideas with ‘Career Hub’
Mysuru, June 27, 2022 (www.justkannada.in): “Please share if you have any new thoughts or ideas with the ‘Career Hub,’ opined Prof. G. Hemanth Kumar, Vice-Chancellor, University of Mysore.
He inaugurated the ‘EUREKA-2022,’ a science fest, held at the Platinum Jubilee Auditorium in Yuvaraja College today.
In his address, Prof. G. Hemanth Kumar said, “Yuvaraja College is one of the best Colleges in Karnataka. Students who are studying in this college are lucky. Nalwadi Krishnaraja Wadiyar thought of starting an University in Mysore in 1914. Till then, a college was functioning by the Madras University. The University of Mysore came into existence in 1916. The Yuvaraja College has also provided education to thousands of students. Prof. Nanjudaiah was the first Vice-Chancellor of this University, and he who was followed by Bhajendrnath Peel. He was Swami Vivekananda’s classmate. It was he who started the Yuvaraja College.”
“There were not many colleges offering science courses in Mysuru those days. Only four colleges used to offer science courses, including the Yuvaraja College, Sharada Vilas, St. Philomena’s and JSS. The Yuvaraja College became autnomous in 2005. Presently four thousand students are studying here,” he added.
“Along with scoring good marks, the students should also develop a habit of generating new thoughts and ideas. The University of Mysore has established a career hub. Whatever thoughts or ideas you have, you can share it there. Think different in nature and research on it. Try to understand how you can research about your thoughts. About a thousand students pass out every year from the Yuvaraja College. I wish all of them would become good researchers and scientists. NEP has been introduced of late, which consists of interdisciplinary courses. It is indeed a very good development,” he explained.
In her address, Program Coordinator Dr. Rubi Selestina said, “the EUREKA science fest started in 2013. It is the brainchild of students of the college. It is completely there thought. The science fest, which started in a small way in the beginning, has grown into a big event today. It has helped the students to understand the in and out of science. EUREKA is a blend of science-arts-culture.”
College Principal Prof. B.N. Yashoada and others were present.

Keywords: Yuvaraja College/ EUREKA-2022/ Science Fest