ಸರಳ ದಸರಾಗೆ ಖರ್ಚಾಗಿದ್ದು ಕೇವಲ 2.91ಕೋಟಿ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ನವೆಂಬರ್,01,2020(www.justkannada.in) : ಸರಳ ದಸರಾಗೆ ಖರ್ಚಾಗಿದ್ದು ಕೇವಲ 2.91ಕೋಟಿ. ಬಿಡುಗಡೆಯಾದ ಹಣದಲ್ಲಿ ಹತ್ತು ಕೋಟಿ ಉಳಿತಾಯವಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎಸ್.ಟಿ.ಸೋಮಶೇಖರ್ ದಸರಾ ಖರ್ಚು ವೆಚ್ಚದ ಲೆಕ್ಕ ನೀಡಿದ್ದಾರೆ.jk-logo-justkannada-logo

ಭಾನುವಾರ ದಸರಾ ಖರ್ಚು ವೆಚ್ಚದ ಲೆಕ್ಕ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ವಿವರ ನೀಡಿದರು.

ದಸರಾಗೆ ಬಿಡುಗಡೆಯಾದ ಹಣದಲ್ಲಿ ಸರಳ ದಸರಾಗೆ ಖರ್ಚಾಗಿದ್ದು ಕೇವಲ 2.91ಕೋಟಿ. ಬಿಡುಗಡೆಯಾದ ಹಣದಲ್ಲಿ ಹತ್ತು ಕೋಟಿ ಉಳಿತಾಯ. ಸರ್ಕಾರದಿಂದ ಹತ್ತು ಕೋಟಿ ಹಣ ಬಿಡುಗಡೆ ಆಗಿದೆ. ಚಾಮರಾಜನಗರ ದಸರಾ ಗೆ 36 ಲಕ್ಷ ರೂಗಳನ್ನು ಸಿಎಂ ಸೂಚನೆ ಮೇರೆಗೆ ನೀಡಲಾಗಿದೆ. ಮಂಡ್ಯ ದಸರಾಗೆ 50 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದರು.

ಪ್ರತಿ ವರ್ಷದಂತೆ 40 ಲಕ್ಷ ರೂ. ಗಳನ್ನು ರಾಜವಂಶಸ್ಥರಿಗೆ ನೀಡಲಾಗಿದೆ. ಸಾಂಸ್ಕೃತಿಕ ದಸರಾ ನಿರ್ವಹಣೆ ಮತ್ತು ಕಲಾವಿದ ಸಂಭಾವನೆ 44,78,000. ದಸರಾ ಆನೆಗಳ ನಿರ್ವಹಣಾ ವೆಚ್ಚ 35 ಲಕ್ಷ, ಜಂಬೂಸವಾರಿ ಕಾರ್ಯಕ್ರಮ ನಿರ್ವಹಣೆಗೆ 16.94 ಲಕ್ಷ, ದಸರಾ ವೇದಿಕೆ 41.08 ಲಕ್ಷ, ದಸರಾ ಕಾರ್ಯಕ್ರಮ ಲೈವ್ ಸ್ಟ್ರೀಮಿಗ್ ಗೆ 5.90 ಲಕ್ಷ , ಸ್ಥಬ್ಧ ಚಿತ್ರ 4.10 ಲಕ್ಷ, ಖರ್ಚು ಎಂದು ಮಾಹಿತಿ ನೀಡಿದರು.

ಹೊಸದಾಗಿ ಯಾವುದೇ ಖರ್ಚು ಮಾಡಿಲ್ಲ

2.91crores-spent-simple-Dasara-Minister S.T.Somashekhar

ನಾನು ಯಾವುದೇ ಕಾರಣಕ್ಕು ಹೊಸದಾಗಿ ಯಾವುದೇ ಖರ್ಚು ಮಾಡಿಲ್ಲ. ಜಿಲ್ಲಾಡಳಿತ ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತಿತ್ತು ಅದನ್ನೆ ಮಾಡಿದ್ದೇವೆ. ರಾಜವಂಶಸ್ಥರಿಗೆ ಗೌರವ ಧನ ನೀಡುವುದು ಸಹ ನಾನು ಹೊಸದಾಗಿ ಆರಂಭಿಸಿಲ್ಲ. ಎಲ್ಲವನ್ನು ಹಳೆ ಸಂಪ್ರದಾಯದಂತೆ ನಡೆಸಿದ್ದೇವೆ. ಮುಡಾ ಸಹ 5 ಕೋಟಿ ಹಣ ನೀಡಲಿದೆ. ಬಾಕಿ ಹಣವನ್ನ ಏನು ಮಾಡಬೇಕು ಅಂತ ಸಿಎಂ ಗಮನಕ್ಕೆ ತಂದು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

key words : 2.91crores-spent-simple-Dasara-Minister S.T.Somashekhar