ಅಮಾಯಕರ ಬಂಧನ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿ.ವೈ ವಿಜಯೇಂದ್ರ ತಿರುಗೇಟು…

ಬೆಂಗಳೂರು,ಆ,19,2020(www.justkannada.in):  ಡಿ.ಜೆ ಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರ ಬಂಧನವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.jk-logo-justkannada-logo

ಈ ಕುರಿತು ಟ್ವೀಟ್ ನಲ್ಲಿ ಕಿಡಿಕಾರಿರುವ ಬಿ.ವೈ ವಿಜಯೇಂದ್ರ, ಬೆಂಗಳೂರು ಗಲಭೆ ಕುರಿತಂತೆ ಒಂದು ಜವಾಬ್ದಾರಿ ವಿರೋಧ ಪಕ್ಷದಂತೆ ನಡೆದುಕೊಳ್ಳುವುದನ್ನು ಬಿಟ್ಟು ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಅಮಾಯಕರನ್ನ ಬಿಟ್ಟುಬಿಡಿ ಕೈ ಮುಖಂಡರನ್ನ ವಿಚಾರಣೆಗೆ ಕರೆಯುವುದು ತಪ್ಪು ಎಂಬ ನಿಮ್ಮ ನಡೆಯನ್ನ ರಾಜ್ಯದ ಜನ  ಗಮನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. State –BJP- vice-presiden-t B, Y Vijayendra –accused- Congress

ಮುಗ್ದರನ್ನು ಬಂಧಿಸಬೇಡಿ ಎಂದು ಮನವಿ ಮಾಡುತ್ತೀರಿ. ಜವಾಬ್ದಾರಿ ವಿಪಕ್ಷದಂತೆ ನೀವು ನಡೆದುಕೊಳ್ಳುತ್ತಿಲ್ಲ. ಅಮಾಯಕರನ್ನ ವಿಚಾರಣೆಗೆ ಕರೆಯುವುದು ತಪ್ಪು. ಅಮಾಯಕರನ್ನ ಬಿಟ್ಟುಬಿಡಿ ಎನ್ನುತ್ತೀರಿ. ನಿಮ್ಮ ನಡೆಯನ್ನ ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.

Key words:  State –BJP- vice-presiden-t B, Y Vijayendra –accused- Congress