ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರ ಮೃತದೇಹ ಪತ್ತೆ…

ರಾಯಚೂರು,ಆ,18,2020(www.justkannada.in): ರಾಯಚೂರಿನ ಕುರ್ವಕುಲ  ಬಳಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಮಹಿಳೆಯರ ಮೃತದೇಹ ಪತ್ತೆಯಾಗಿದೆ.jk-logo-justkannada-logo

ತೆಲಂಗಾಣ ಗಡಿ ಭಾಗದ ಜುರಾಲಾ ಸಮೀಪದ ಅಣೆಕಟ್ಟು ಬಳಿ  ಇಂದು ಬೆಳಿಗ್ಗೆ  ಮೂವರು ಮಹಿಳೆಯರ ಶವ ಪತ್ತೆಯಾಗಿವೆ. ಘಟನೆ ನಡೆದು ಒಂದು ದಿನದ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.  ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ.raichur-water death-three-women-dead body-found

ಆಗಸ್ಟ್ 17  ರಂದು ತೆಲಂಗಾಣದ ಪಂಚಪಾಡುವಿನಿಂದ 13 ಮಂದಿ ಸಂತೆ ಮುಗಿಸಿಕೊಂಡು  ತಮ್ಮ ಊರಿಗೆ ವಾಪಸ್ ಆಗುತ್ತಿದ್ದರು. ತೆಪ್ಪದಲ್ಲಿ ಮರಳುತ್ತಿದ್ದ ವೇಳೆ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾಗಿದ್ದರು. ಒಬ್ಬ ಬಾಲಕಿ ಮತ್ತು ಮೂವರು ಮಹಿಳೆಯರು ನಾಪತ್ತೆಯಾಗಿದ್ದರು.

Key words: raichur-water death-three-women-dead body-found