ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಸಚಿವ ಶ್ರೀರಾಮುಲು ಹೇಳಿದ್ದೇನು ಗೊತ್ತೆ…?

ನವದೆಹಲಿ,ಫೆ,9,2020(www.justkannada.in):  ಡಿಸಿಎಂ ಸ್ಥಾನ ನೀಡದಿರುವುದಕ್ಕೆ ನನಗೆ ಬೇಸರವಿಲ್ಲ. ರಾಜಕಾರಣದಲ್ಲಿ ಇದೆಲ್ಲಾ ಸಹಜ. ಅಮಿತ್ ಶಾ ಅವರ ಬಳಿ ಡಿಸಿಎಂ ಸ್ಥಾನ ವಿಚಾರ ಚರ್ಚಿಸಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಡಿಸಿಎಂ ಸ್ಥಾನ  ನೀಡದೆ ಇರೋದಕ್ಕೆ ಅಸಮಾಧಾನ ಇಲ್ಲ.  ಅಮಿತ್ ಶಾ ಭೇಟಿಯಾಗಿ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿದ್ದೇನೆ. ಈ ವೇಳೆ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಈ ಬಗ್ಗೆ ಚರ್ಚಿಸಿಯೂ ಇಲ್ಲ ಎಂದರು.

ಕೊರೋನಾ ವೈರಸ್ ಬಗ್ಗೆ ಗೃಹಸಚಿವರ ಜತೆ ಚರ್ಚಿಸಿದ್ದೇನೆ ರಾಜ್ಯದಲ್ಲಿ 80-84 ಜನರ ರಕ್ತದ ಮಾದರಿ ಪರೀಕ್ಷಿಸಲಾಗಿದೆ. ಅವರೆಲ್ಲರದ್ದೂ ನೆಗೆಟಿವ್ ಎಂದು ರಿಪೋರ್ಟ್ ಬಂದಿದೆ. ಯಾವುದೇ ಆತಂಕ ಬೇಡ  ಎಂದು ಶ್ರೀರಾಮುಲು ತಿಳಿಸಿದರು.

Key words: Minister- Shriramulu –meet- Union Home Minister- Amit Shah- New Delhi