ಮೈಸೂರಲ್ಲಿ ಅರ್ಧ ಕಿ.ಮೀ ಉದ್ದದ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ತಹಸೀಲ್ದಾರ್.

 

ಮೈಸೂರು, ಆ.21, 2019 : (www.justkannada.in news) : ಸುಮಾರು ಅರ್ಧ ಕಿ.ಮೀ ಉದ್ದದ ರಾಜಕಾಲುವೆ ( ಸರಕಾರಿ ಹಳ್ಳ ) ವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ತಹಸೀಲ್ದಾರ್ ನೇತೃತ್ವದಲ್ಲಿ ಬುಧವಾರ ತೆರವುಗೊಳಿಸಲಾಯಿತು.

ಕುಂಬಾರಕೊಪ್ಪಲು ಪ್ರದೇಶದಲ್ಲೇ ಈ ಒತ್ತುವರಿ ತೆರವು ಕಾರ್ಯ ನಡೆದಿರುವುದು. ಮೈಸೂರು ಕಸಬಾ ಹೋಬಳಿ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆಯಿತು.

ಕಳೆದ ತಿಂಗಳಷ್ಟೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಲುವಾಗಿ ನಗರ ಪ್ರದಕ್ಷಿಣೆ ನಡೆಸಿದ್ದರು. ಈ ವೇಳೆ ಶಾಸಕ ನಾಗೇಂದ್ರ ಅವರು ಕುಂಬಾರಕೊಪ್ಪಲಿನ ರಾಜಕಾಲುವೆ ಒತ್ತುವರಿ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು. ಆಗ, ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಜಿಟಿಡಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಒತ್ತುವರಿ ತೆರವುಗೊಳಿಸಿತು. ಈ ವೇಳೆ ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವೇಂದ್ರಗೌಡ, ನಗರ ಪಾಲಿಕೆ ಅಧಿಕಾರಿ ವಿರೇಶ್, ರೆವಿನ್ಯೂ ಇನ್ಸ್ ಪೆಕ್ಟರ್ ಪ್ರಶಾಂತ್, ಸರ್ವೆಯರ್ ಬಸವರಾಜು ಮತ್ತಿತರರು ಹಾಜರಿದ್ದರು.

key words : mysore-Rajakaluve- has been evicted- in KumbaraKoppalu.

——–

summary :

Rajakaluve ( Sarkari Halla) has been evicted in KumbaraKoppalu today morning alongwith Police Bandoobusth .PI Raghavendragowda Metagalli Police Station. Corporation Development Officer Veeresh Kasaba Revenue Inspecter Prasanth , City Surveyor Basavaraju & All Kasaba Hobli Vas we’re present during the eviction.