ಸಿಡಿ ಇದ್ರೆ ಬಿಡುಗಡೆ ಮಾಡಲಿ: ಮೂರು ದಿನಗಳಲ್ಲಿ ಖಾತೆ ಹಂಚಿಕೆ -ಸಚಿವ ಎಂಟಿಬಿ ನಾಗರಾಜ್….

ಚಿತ್ರದುರ್ಗ,ಜನವರಿ,15,2021(www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ 7 ಮಂದಿ ನೂತನ ಸಚಿವರಾಗಿ ಸೇರ್ಪಡೆಯಾಗಿದ್ದು ಈ ನಡುವೆ ಖಾತೆ ಹಂಚಿಕೆ ಮಾಡುವುದು ಬಾಕಿ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ನೂತನ ಸಚಿವ ಎಂಟಿಬಿ ನಾಗರಾಜ್ ಮೂರು ದಿನಗಳಲ್ಲಿ ಖಾತೆ ಹಂಚಿಕೆಯಾಗಲಿದೆ ಎಂದಿದ್ದಾರೆ.jk-logo-justkannada-mysore

ಇನ್ನು ಸಿಡಿ ಬಿಡುಗಡೆ ವಿಚಾರ ಕುರಿತು ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಸಿಡಿ ಇದೆ ಎಂಬುದು ಅಂತಕಂತೆಯ ಮಾತು. ಸಿಡಿ ಇದೆ ಎಂದು ಹೆದರಿಸಿದರೇ ಏನು ಪ್ರಯೋಜನ. ಸಿಡಿ ಇದ್ದರೇ ಬಿಡುಗಡೆ ಮಾಡಲಿ ಎಂದು ಹೇಳಿದರು. CD- release - Minister -MTB Nagaraj-Chitradurga

ಹಾಗೆಯೇ ಸಿ.ಪಿ ಯೋಗೇಶ್ವರ್ ಎಂಟಿಬಿ ನಾಗರಾಜ್ ಬಳಿ ಸಾಲ ಮಾಡಿದ್ದರು ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್ ನನ್ನ ಬಳಿ ಮನೆಯನ್ನ ಅಡ ಇಟ್ಟಿಲ್ಲ. ರಮೇಶ್ ಜಾರಕಿಹೊಳಿ ಏಕೆ ಹೀಗೆ ಹೇಳಿದರು ಗೊತ್ತಿಲ್ಲ ಎಂದರು.

Key words: CD- release – Minister -MTB Nagaraj-Chitradurga