Thursday, August 27, 2026

BDA Apartments

Home Front Page ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ದೆಹಲಿಗೆ ಹೊರಟ ಅನರ್ಹ ಶಾಸಕ ಹೆಚ್.ವಿಶ್ವನಾಥ್….

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ದೆಹಲಿಗೆ ಹೊರಟ ಅನರ್ಹ ಶಾಸಕ ಹೆಚ್.ವಿಶ್ವನಾಥ್….

ಮೈಸೂರು,ಆ,21,2019(www.justkannada.in): ಅನರ್ಹ ಶಾಸಕ ಹೆಚ್.ವಿಶ್ವನಾಥ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ದೆಹಲಿಗೆ ತೆರಳುತ್ತಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಚಿವ  ಸಾರಾ ಮಹೇಶ್ ಸುದ್ದಿಗೋಷ್ಠಿ ನಡೆಸಿ,  ನನ್ನ ಮಾತಿಗೆ ನನ್ನ ಸವಾಲಿಗೆ ನಾನು ಈಗಲು ಬದ್ದ. ವಿಶ್ವನಾಥ್ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಅನೋದಾದ್ರೆ ಅವರ ನೆಚ್ಚಿನ ದೇಗುಲ ಕಪ್ಪಡಿ ದೇಗುಲಕ್ಕೆ ಬಂದು ಪ್ರಮಾಣ ಮಾಡಲಿ. ಅವರೇ ನಿಗಧಿಪಡಿಸುವ ದೇಗುಲಕ್ಕೆ ಬರಲಿ ಪ್ರಮಾಣ ಮಾಡಲಿ. ಅವರು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲವೆಂದು ಹೇಳಿದರೆ. ಆಗ ನಾನು ರಾಜಕೀಯ ಜೀವನದಿಂದಲೇ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದ್ದರು.

ಮಾಜಿ ಸಚಿವ ಸಾ.ರಾ ಮಹೇಶ್ ಸುದ್ದಿಗೋಷ್ಠಿ ನಡೆಸಿದ  ಬೆನ್ನಲ್ಲೆ  ಹೆಚ್ ವಿಶ್ವನಾಥ್ ದೆಹಲಿಗೆ ತೆರಳಿದ್ದಾರೆ. ಹೆಚ್.ವಿಶ್ವನಾಥ್  ಇಂದು ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಇನ್ನು ಹೆಚ್.ವಿಶ್ವನಾಥ್,  ಸುಪ್ರೀಂ ಕೋರ್ಟ್ ನಲ್ಲಿ ಅನರ್ಹತೆಯನ್ನು ಪ್ರಶ್ನಿಸಿ ಹಾಕಿರುವ ಅರ್ಜಿಯ  ವಿಚಾರದ ಬಗ್ಗೆ ವಕೀಲರೊಂದಿಗೆ ಚರ್ಚಿಸಲು ತೆರಳಿದ್ದಾರೆ ಎನ್ನಲಾಗಿದೆ..ಮೈಸೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಟು ನಂತರ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದಾರೆ ಎನ್ನಲಾಗಿದೆ.

Key words: disqualified MLA – H. Vishwanath-chamundi hills- Delhi