ಬಡ ವಿದ್ಯಾರ್ಥಿನಿ ಶಿಕ್ಷಣಕ್ಕೆ ನೆರವಾದ ಪ್ರಕಾಶ್ ರೈ !

ಬೆಂಗಳೂರು, ಅಕ್ಟೋಬರ್ 05, 2020 (www.justkannada.in):
ನಟ ಪ್ರಕಾಶ್ ರೈ ಬಡವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.

ಹೌದು, ಬಡ ವಿದ್ಯಾರ್ಥಿನಿಗೆ ನೆರವಾಗುವ ಮೂಲಕ ಗಮನ ಸೆಳೆದಿದ್ದಾರೆ ಪ್ರಕಾಶ್ ರೈ.
ಆಂಧ್ರ ಪ್ರದೇಶದ ಸಿರಿ ಚಂದನ ಎಂಬ ವಿದ್ಯಾರ್ಥಿನಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಮುಗಿಸಿದ್ದಳು. ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಆಕೆಗೆ ಲಂಡನ್ ನ ಸಾಲ್ಫೋರ್ಡ್ ವಿವಿಯಲ್ಲಿ ಮೆರಿಟ್ ಆಧಾರದಲ್ಲಿ ಸೀಟ್ ಸಿಕ್ಕಿತ್ತು.

ವಿದೇಶಕ್ಕೆ ತೆರಳುವಷ್ಟು ಆಕೆಯ ಕುಟುಂಬದವರು ಸ್ಥಿತಿವಂತರಲ್ಲ. ಈ ವಿಚಾರ ಅದು ಹೇಗೋ ಪ್ರಕಾಶ್ ರೈಗೆ ತಿಳಿಯಿತು. ತಕ್ಷಣವೇ ಅವರು ಸಿರಿ ಚಂದನ ಕಾಲೇಜು ಫೀಸ್ ಹಾಗೂ ಆಕೆ ಲಂಡನ್ ಗೆ ತೆರಳಲು ತಗುಲುವ ವೆಚ್ಚ ಭರಿಸುವ ಮೂಲಕ ಬಡ ವಿದ್ಯಾರ್ಥಿನಿಗೆ ನೆರವಾಗಿದ್ದಾರೆ.