ಪೌರಕಾರ್ಮಿಕರ ವೇತನ ತಾರತಮ್ಯ ವಿಚಾರ: ಮೈಸೂರು ವಿವಿ ಕುಲಪತಿಗಳಿಂದ ಸಮಸ್ಯೆ ಬಗೆಹರಿಸುವ ಭರವಸೆ- ಕೋಟೆ ಶಿವಣ್ಣ

ಮೈಸೂರು,ಜನವರಿ,18,2022(www.justkannada.in): ಮೈಸೂರು ವಿವಿಯಲ್ಲಿ ಪೌರಕಾರ್ಮಿಕರಿಗೆ ವೇತನ ತಾರತಮ್ಯ ನಡೆಯುತ್ತಿದೆ. ಪೌರಕಾರ್ಮಿಕರಿಗೆ ಒಂದೇ ವಿಧವಾದ ವೇತನ ನೀಡುವಂತೆ ಸೂಚನೆ ನೀಡಿದ್ದೇನೆ. ಉಪಕುಲಪತಿ ಪ್ರೊ, ಹೇಮಂತ್ ಕುಮಾರ್ 15ದಿನದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಟೆ ಶಿವಣ್ಣ, ವೇತನ ತಾರತಮ್ಯ ಸಮಸ್ಯೆ ಬಗೆಹರಿಯದಿದ್ದರೆ ಕೇಸ್ ದಾಖಲಿಸುವುದಾಗಿ ಉಪಕುಲಪತಿಗೆ  ಎಚ್ಚರಿಕೆ ನೀಡಲಾಗಿದೆ. ಪೌರಕಾರ್ಮಿಕನ್ನ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವುದೇ ನಮ್ಮ ಉದ್ದೇಶ.

ಮೈಸೂರು ವಿವಿ ಹಾಗೂ ಪಾಲಿಕೆಯ ಗುತ್ತಿಗೆ ನೌಕರರ ಖಾಯಂಗೊಳಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಪೌರಕಾರ್ಮಿಕರ ಮೂಲಭೂತ ಸೌಕರ್ಯ ಓದಿಗಿಸಲು ಆಯೋಗ ಬದ್ಧವಾಗಿದೆ ಎಂದು ಕೋಟೆ ಶಿವಣ್ಣ ಹೇಳಿದರು.

Key words: wage -discrimination -Mysore university- kote Shivanna