ಜೆಡಿಎಸ್ ಗೆ ಜಿಟಿ ದೇವೇಗೌಡ ಗುಡ್ ಬೈ.

 

ಮೈಸೂರು,ಆಗಸ್ಟ್,24,2021(www.justkannda.in): ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್ ಕಾರ್ಯಕ್ರಮಗಳಿಂದ ದೂರವಿರುವ ಶಾಸಕ ಜಿ.ಟಿ ದೇವೇಗೌಡ, ಇದೀಗ ಮತ್ತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಜೆಡಿಎಸ್ ನಲ್ಲಾದ ನೋವಿನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹಾಗೆಯೇ ಜೆಡಿಎಸ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ ಜೆಡಿಎಸ್ ನಿಂದ ಅಂತರ ಕಾಯ್ದುಕೊಳ್ಳಲು ನಿಜವಾದ ಕಾರಣ ಹೇಳಿದ ಶಾಸಕ ಜಿ.ಟಿ ದೇವೇಗೌಡ, ನಾನು ಚಾಮುಂಡೇಶ್ವರಿ ಕ್ಷೇತ್ರದ ಕೆಲಸ ಮಾಡುತ್ತಿದ್ದೇನೆ. ಮಂಡ್ಯ ಜೆಡಿಎಸ್ ನಾಯಕರು ನನ್ನನ್ನು ಭೇಟಿ ಮಾಡಿದ್ರು. ಚುನಾವಣೆ ಬರ್ತಿದೆ ನೀವು ಯಾವುದೇ ಸಭೆ ಸಮಾರಂಭಕ್ಕೆ ಬರ್ತಿಲ್ಲ ಎಂದು ಹೇಳಿದ್ರು. ಅವರ ಭಾವನೆಗಳನ್ನ ನನ್ನ ಹತ್ತಿರ ಹಂಚಿಕೊಂಡರು. ಹಲವು ಸಮಯ ಅವರ ಜೊತೆ ಮಾತುಕತೆ ನಡೆಸಿದರು. ಮತ್ತೆ ದೊಡ್ಡಗೌಡರ ಜೊತೆ ಬರುತ್ತೇನೆ ಎಂದು ಹೇಳಿದ್ದರು. ನಾನು ಅವರಿಗೆ ಮೊದಲು  ಹರೀಶ್ ಗೌಡ ಜೊತೆ ಮಾತನಾಡುತ್ತೇನೆ ಎಂದು ಹೇಳಿದೆ. ನಂತರ ನಿಖಿಲ್ ನನ್ನ ಮಗನ ಜೊತೆ ಮಾತನಾಡಿದ್ರು. ಕಳೆದ ಬಾರಿ ಮೇಯರ್ ವಿಚಾರವಾಗಿ ನನ್ನ ಕೇಳಲಿಲ್ಲ. ಹುಣಸೂರಿಗೆ ನನ್ನ ಮಗನನ್ನ ಎಂಎಲ್ ಎ ನಿಲ್ಲಿಸುವ ವಿಚಾರವನ್ನು ಸಹ ಕೇಳಲಿಲ್ಲ. ಮೈಸೂರಿನ ಯಾವುದೆ ವಿಚಾರವನ್ನು ನನ್ನ ಬಳಿ ಕುಮಾರಸ್ವಾಮಿ ಚರ್ಚೆ ಮಾಡಲಿಲ್ಲ. ನನ್ನಿಂದ ದೂರ ಅದವರನ್ನ  ಸೇರಿಸಿ ಕಾರ್ಯಕ್ರಮ ಮಾಡುತ್ತಾರೆ. ನಾನು ಇರೋ ವರೆಗೂ ಜೆಡಿಎಸ್ಗೆ ಸೇರಿಸೊಲ್ಲ ಎಂದಿದ್ದಾರೆ. ನನಗೆ ಹಲವು ಬಾರಿ ಅವಮಾನ ಮಾಡಿದ್ದಾರೆ. ಹಾಗಾಗಿ ಜೆಡಿಎಸ್ ನ ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿಲ್ಲ ಎಂದರು.coming-mysore-carrying-oxygen-mla-gt-deve-gowda

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ. ನನ್ನನ್ನ ಕ್ಷಮಿಸಿ ಅಪ್ಪಾಜಿ, ನಾನು ಸಿದ್ದರಾಮಯ್ಯ ಡಿಕೆಶಿ ಜೊತೆ ಮಾತನಾಡಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಹೇಳಿದ್ದೇನೆ ಎಂದರು.

 

key words: GT Deve Gowda -Goodbye – JDS.