ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಕಿಡಿ.

ಮೈಸೂರು,ಆಗಸ್ಟ್,24,2021(www.justkannada.in): ಕೇಂದ್ರ ಸಚಿವರು ನಡೆಸುತ್ತಿರುವ ಬಿಜೆಪಿ ಜನಾಶೀರ್ವಾದ ಯಾತ್ರೆ ಬಗ್ಗೆ ಕಿಡಿಕಾರಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಯಾವ ಪುರುಷಾರ್ಥಕ್ಕಾಗಿ ಜನಾಶೀರ್ವಾದ ಯಾತ್ರೆ ಮಾಡ್ತಿದ್ದೀರಿ. ರಾಜ್ಯಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಏನು..? ಎರಡು ವರ್ಷದಿಂದ ಎಷ್ಟು ಅನುದಾನ ನೀಡಿದ್ದೀರಿ.? ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಆರ್.ಧೃವನಾರಾಯಣ್, ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದೀರಿ. ನ್ಯಾಯವಾಗಿ ಬರಬೇಕಾಗಿರುವ ಜಿಎಸ್ ಟಿ ಹಣ ನೀಡಿಲ್ಲ. ಆಕ್ಸಿಜನ್, ವ್ಯಾಕ್ಸಿನೇಷನ್‌ ಅಲಾಟ್ ಮಾಡುವಲ್ಲಿಯೂ ಅನ್ಯಾಯ ವಾಗಿದೆ. ಇವತ್ತು ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ ಅಬ್ಬರದ ಮಾತುಗಳನ್ನಾಡುತ್ತಿದ್ದಾರೆ. ಪಾರ್ಲಿಮೆಂಟಿನಲ್ಲಿ ನಿಮ್ಮ ಫರ್ಫಾಮೆನ್ಸ್ ಏನು..? ಅನ್ಯಾಯದ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡದ ನೀವು, ಉತ್ತರನ ಪೌರುಷ ಒಲೆ ಮುಂದೆ ಅನ್ನೊ ಹಾಗೆ ಹೇಳಿಕೆ  ನೀಡುತ್ತಿದ್ದೀರಿ ಎಂದು ಕಿಡಿಕಾರಿದರು.

ಧ್ರುವನಾರಾಯಣ್ ಮತ್ತೊಬ್ಬ ವಿಶ್ವನಾಥ್ ಆಗ್ತಾರೆ ಎಂಬ ಹೇಳಿಕೆ ನೀಡಿದ್ಧ ಸಂಸದ ಪ್ರತಾಪ್‌ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ ಆರ್.ಧ್ರುವನಾರಾಯಣ್, ಇದು ಪ್ರತಾಪ್‌ ಸಿಂಹರ ಬೇಜವಾಬ್ದಾರಿ ಹೇಳಿಕೆ. ಒಂದು ಧರ್ಮವನ್ನ ಗುರಿಯಾಗಿಟ್ಟುಕೊಂಡು ಕೊಟ್ಟ ಹೇಳಿಕೆ ಆಧಾರದ ಮೇಲೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದೇನೆ. ನನ್ನ ಹೇಳಿಕೆಗೆ ಈಗಲು ಬದ್ದ ಎಂದು ನಾನು ಹೇಳಿದ್ದೇನೆ ಎಂದರು.

Key words:  KPCC work President -R. Dhruvanarayan – BJP- Janashirvada Yatra.