ಸಾ.ರಾ ಮಹೇಶ್ ಸ್ವಾರ್ಥಕ್ಕಾಗಿ ಜೆಡಿಎಸ್ ಬಲಿ- ಶಾಸಕ ಜಿ.ಟಿ ದೇವೇಗೌಡ.

ಮೈಸೂರು,ಆಗಸ್ಟ್,24,2021(www.justkannada.in):  ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿರುವ ಶಾಸಕ ಜಿ.ಟಿ ದೇವೇಗೌಡ ಇದೀಗ ಮತ್ತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಶಾಸಕ ಸಾ.ರಾ ಮಹೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡರು, ಕುಮಾರಸ್ವಾಮಿ ಇಲ್ಲದೇ ಸಾ ರಾ ಮಹೇಶ್ ಅವರ ಶಕ್ತಿ ತೋರಿಸಲಿ. ಸಾ ರಾ ಮಹೇಶ್ ಶಕ್ತಿಗೋಸ್ಕರ ಕುಮಾರಸ್ವಾಮಿಯನ್ನು ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿಯನ್ನು ಮುಖವಾಣಿಯಾಗಿಟ್ಟುಕೊಂಡಿರುವ ಸಾ ರಾ ಮಹೇಶ್ ಗೆ ಮೈಸೂರು ಜಿಲ್ಲೆಯಲ್ಲಿ ಸಿಂಗಲ್ ಲೀಡರ್ ಆಗುವ ಆಸೆಯಿದೆ. ಅದ್ದರಿಂದ ಜಿಟಿಡಿ ಜೆಡಿಎಸ್ ನಲ್ಲಿದ್ದರೆ ಅದು ಸಾಧ್ಯವಾಗುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ನನ್ನನ್ನು ಪಕ್ಷದ ಕಾರ್ಯಕ್ರಮಗಳಿಗೆ ಕರೆಯುತ್ತಿಲ್ಲ. ಆದರೆ ಮಾಧ್ಯಮಗಳ ಮುಂದೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಜಿಟಿಡಿಯವರನ್ನು ಕರೆದರೂ ಬರುತ್ತಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಅವರ ಸ್ವಾರ್ಥಕ್ಕಾಗಿ ಜೆಡಿಎಸ್ ಬಲಿಯಾಗುತ್ತಿದೆ ಎಂದು ಕಿಡಿಕಾರಿದರು.

ಹೆಚ್.ಡಿ ಕುಮಾರಸ್ವಾಮಿ ಇಲ್ಲದಿದ್ದರೆ ಸಾ.ರಾ ಮಹೇಶ್ ಜಿರೋ..

ಹೆಚ್ ಡಿ ಕುಮಾರಸ್ವಾಮಿ ಇದ್ದರೆ ಮಾತ್ರ ಸಾರಾ ಮಹೇಶ್ ಹೀರೋ. ಕುಮಾರಸ್ವಾಮಿ ಇಲ್ಲದಿದ್ದರೆ ಸಾ.ರಾ ಮಹೇಶ್ ಜಿರೋ ಎಂದು ಲೇವಡಿ ಮಾಡಿದ ಜಿ.ಟಿ ದೇವೇಗೌಡ. 2018ರಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಮೊದಲ 12 ತಿಂಗಳು ಸಚಿವನಾಗಿದ್ದೆ. ಆ ಬಳಿಕ 28 ತಿಂಗಳಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇನ್ನುಳಿದ 20 ತಿಂಗಳ ಅವಧಿಗೂ ಶಾಸಕನಾಗಿಯೇ ಮುಂದುವರಿಯುತ್ತೇ‌ನೆ. ಇದರ ಜೊತೆಗೆ ಸಹಾಕಾರಿ ಮಹಾಮಂಡಲದ ಅಧ್ಯಕ್ಷ‌ನಾಗಿದ್ದೇನೆ.  ಹೆಚ್ ಡಿ ದೇವೇಗೌಡ ಕುಟುಂಬದ ಬಗ್ಗೆ ನನಗೆ ಅಪಾರ ಪ್ರೀತಿಯಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರೀಶ್ ಗೌಡನಿಗೆ ಹುಣಸೂರಿನಲ್ಲಿ ಸ್ಪರ್ಧಿಸುವ ಅರ್ಹತೆಯಿತ್ತು. ಆದರೂ ಆರಂಭದಲ್ಲಿ ಪ್ರಜ್ವಲ್ ರೇವಣ್ಣ ಹೆಸರನ್ನು ಪ್ರಸ್ತಾಪಿಸಿದ್ರು. ಆದರೆ ಕೊನೆಯಲ್ಲಿ ಎಚ್.ವಿಶ್ವನಾಥ್‌ರನ್ನು ತಂದು ನಿಲ್ಲಿಸಿದರು. ಆಗಲೂ ನಾನು ನನ್ನ ಪತ್ನಿ ಮಗ ಎಲ್ಲರೂ ಓಡಾಡಿ ವಿಶ್ವನಾಥ್ ರನ್ನು ಗೆಲ್ಲಿಸಿದೇವು.ಕಳೆದ ಹುಣಸೂರು ಉಪ ಚುನಾವಣೆಯಲ್ಲಿ ಹರೀಶ್ ಗೌಡರನ್ನು ನಿಲ್ಲಿಸುತ್ತೇವೆಂದರು. ಆಗ ನಾನು ಬೇಡ ಅಲ್ಲಿ ಶೆಟ್ಟರು ಗೆದ್ದಾಗಿದೆ ಎಂದೇ. ಆ‌ ಕೂಡಲೇ ಅಲ್ಲಿಂದ ವಾಪಸ್ ಬಂದೆ. ಕುಮಾರಸ್ವಾಮಿ ಆಡಿರುವ ಮಾತುಗಳನ್ನ ನಾನು ಮರೆಯಲು ಸಾಧ್ಯವಿಲ್ಲ. ಮೈಸೂರಿನಲ್ಲಿ ಕೆಲವರ ಸಹವಾಸ ಬಿಡಬೇಕು ಎಂದು ಜೆಡಿಎಸ್‌ ನಲ್ಲಾದ ನೋವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು.

ನಾನು ಯಾವುದೇ ಪಕ್ಷದಲ್ಲಿದ್ದಾಗಲೂ ಆ ಪಕ್ಷಕ್ಕೆ ವಿರುದ್ದವಾಗಿ ‌ನಡೆದುಕೊಂಡಿಲ್ಲ. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಎದುರಾದ ಮೈಸೂರು ಮೇಯರ್ ಚುನಾವಣೆಯಲ್ಲಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನನ್ನ ಮಾತು ನಡವಳಿಕೆ ವರ್ತನೆ ಕಠಿಣ. ನನ್ನ ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಮಾತನಾಡುತ್ತೇನೆ. ಅದನ್ನು ಅವರಿಗೆ ಸಹಿಸಿಕೊಳ್ಳಲು ಆಗೋದಿಲ್ಲ ಅನಿಸುತ್ತೇ. ಆ ನಂತರದ ದಿನಗಳಲ್ಲಿ ನನ್ನಿಂದ ದೂರವಾಗಿದ್ದವರ ಪೈಕಿ ಒಬ್ಬರನ್ನು ಮೇಯರ್ ಮಾಡಲಾಯಿತು. ಆ ಬಳಿಕ ನಡೆದ ಜೆಡಿಎಸ್ ಯಾವುದೇ ಸಭೆ ಸಮಾರಂಭಗಳಿಗೂ ನನ್ನನ್ನು ಕರೆಯಲಿಲ್ಲ‌. ನಾನು ಜೆಡಿಎಸ್ ಬಿಡದಿದ್ದರೂ ಕರೆದಿಲ್ಲ, ಕರೆದು ಮಾತನಾಡಿಲ್ಲ. ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಮಾಡಬೇಕು ಎಂದು ನಿಯೋಗ ತೆರಳಿತ್ತು. ಆಗ ಸಾ ರಾ ಮಹೇಶ್ ರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವಂತೆ ಹೆಚ್ ಡಿಕೆ ಹೇಳಿದ್ದಾರೆ. ನಾನು ಯಾವುದೇ ಹುದ್ದೇ ಕೇಳದಿದ್ದರೂ ಅಂದು ನನಗೆ ಅಪಮಾನ ಮಾಡಿದ್ದಾರೆ ಎಂದು ಜಿಟಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಕಳೆದ ನಗರಪಾಲಿಕೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ ವೇಳೆ ಬಳಸಿದ ಭಾಷೆಯನ್ನು ಹೇಳಲಾಗುವುದಿಲ್ಲ. ಆಗಲೂ ಅವರಿಗೆ ಅಂತಹ ಭಾಷೆ ಬಳಸಬೇಡಿ ಎಂದು ಹೇಳಿದೆನೇ ಹೊರತು, ಬೇರೇನನ್ನೂ ಹೇಳಲಿಲ್ಲ. ಕಳೆದ ಪಾಲಿಕೆ ಚುನಾವಣೆಯಲ್ಲಿ ಸಾ ರಾ ಮಹೇಶ್ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ.ಹೆಚ್ ಡಿಕೆ ಜೊತೆ ಒಂದು ದಿನ ಮಾತ್ರ ನೆಪ ಮಾತ್ರಕ್ಕೆ ಸಾ ರಾ ಮಹೇಶ್ ಪ್ರಚಾರ ಮಾಡಿದರು. ಆದರೆ ನಾನು ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಚುನಾವಣೆ ಪ್ರಚಾರ ಮಾಡಿದ್ದೇ‌ನೆ‌. ನಿಮಗೆ ರಾಜಕೀಯ ಬಿಟ್ಟರೆ ಬೇರೇನೂ ಗತಿಯಿಲ್ಲ ಎಂದು ಸಾ ರಾ ಮಹೇಶ್ ಒಮ್ಮೆ ಹೇಳಿದರು. ಆಗ ಹೆಚ್ ಡಿ ದೇವೇಗೌಡರು ಸಾ ರಾ ಗೆ ಬೈದರು. ಇಷ್ಟೆಲ್ಲಾ ಆದರೂ ನಾನು ಬಂದು ಎಲ್ಲಾ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದರು.

Key words: JDS -sacrifices -sara Mahesh’s –selfishness-MLA GT Deve Gowda.