ನವೆಂಬರ್ ಅಂತ್ಯದವರೆಗೂ ಉಚಿತ ರೇಷನ್: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ವಿಸ್ತರಣೆ ಮಾಡಿ ಪ್ರಧಾನಿ ಮೋದಿ ಘೋಷಣೆ…

ನವದೆಹಲಿ,ಜೂ,30,2020(www.justkannada.in): ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ನವೆಂಬರ್ ವರೆಗೆ ವಿಸ್ತರಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ನವೆಂಬರ್ ವರೆಗೆ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ ನವೆಂಬರ್ ನಲ್ಲೂ ಬಡವರಿಗೆ ಉಚಿತ ಆಹಾರ ದಾನ್ಯ ನೀಡಲಾಗುತ್ತದೆ. 5ಕೆಜಿ ಅಕ್ಕಿ ಅಥವಾ ಗೋಧಿ, ಬೇಳೆ ಉಚಿತ ನೀಡುತ್ತೇವೆ. 80 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಸಂಕಷ್ಟಕ್ಕೆ ಸಿಲುಕಿದ್ದ ಬಡವರಿಗೆ ಅನುಕೂಲವಾಗಲೆಂದು ಗರೀಬ್ ಕಲ್ಯಾಣ್ ಯೋಜನೆ ಘೋಷಿಸಣೆ ಮಾಡಲಾಗಿದೆ ಎಂದರು.free-ration-november-pm-modi-announces

ಕೊರೊನಾ ವಿರುದ್ದ ಹೋರಾಡುತ್ತ ಅನ್ ಲಾಕ್ 2ಕ್ಕೆ ಪ್ರವೇಶಿಸಿದ್ದೇವೆ. ನಮ್ಮಲ್ಲಿ ಕೊರೋನಾಗೆ ಸಾವಿನ ಸಂಖ್ಯೆ ಕಡಿಮೆ ಇದೆ. ಬೇರೆದೇಶಕ್ಕಿಂತ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ಲಾಕ್ ಡೌನ್ ನಿಂದ ಲಕ್ಷಾಂತರ ಜನರ ಪ್ರಾಣ ಉಳಿದಿದೆ. ಕಂಟೇನ್ ಮೆಂಟ್ ಜೋನ್ ನಲ್ಲಿರುವವರು ಎಚ್ಚರಿಕೆಯಿಂದಿರಿ ಎಂದು ಸಂದೇಶ ನೀಡಿದರು.

Key words: Free ration – November-PM Modi -announces