ಅಮಾನವೀಯ ರೀತಿಯಲ್ಲಿ ಶವ ಸಂಸ್ಕಾರ ವಿಚಾರ: ತನಿಖೆಗೆ ಆದೇಶ ನೀಡಿದ ಬಳ್ಳಾರಿ ಜಿಲ್ಲಾಧಿಕಾರಿ…

ಬಳ್ಳಾರಿ,ಜೂ,30,2020(www.justkannada.in): ಬಳ್ಳಾರಿಯಲ್ಲಿ ಅಮಾನವೀಯ ರೀತಿಯಲ್ಲಿ ಶವ ಸಂಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ ನೇತೃತ್ವದಲ್ಲಿ ತನಿಖೆಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶ ನೀಡಿದ್ದಾರೆ.

ನಿನ್ನೆ ಒಂದೇ ದಿನ 9 ಜನರು‌ ಮೃತಪಟ್ಟಿದ್ರು ಒಂದೇ ಬಾರಿ ಶವ ಸಂಸ್ಕಾರ ಮಾಡಬೇಕಾದರೆ ಶವವನ್ನು ‌ಮೇಲಿಂದ ಎಸೆದಿದ್ರು ಎಂದು ಮಾಧ್ಯಮಗಳ ವರದಿಯಾದ ಹಿನ್ನಲೆ ಇದೀಗ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ತನಿಖೆಗೆ ಆದೇಶ ಮಾಡಿದ್ದಾರೆ.ballari-dc-ss-nakul-corona-investigation

ಬಳ್ಳಾರಿಯಲ್ಲಿ ಕೊರೊನಾದಿಂದ ಇಂದೂ ಕೂಡ 5 ಸಾವನ್ನಪ್ಪಿವೆ.  ನಿನ್ನೆ ಒಂದೇ ದಿನ 9 ಜನರು ಮೃತರಾಗಿದ್ದರು ಇಂದು ಕೂಡ ಐದು ಜನರ ಸಾವನ್ನಪ್ಪಿರುವುದು ಸೇರಿದಂತೆ ಕೊರೋನಾ ಮೃತಪಟ್ಟವರ ಸಂಖ್ಯೆ28 ಕ್ಕೇರಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾಹಿತಿ ನೀಡಿದರು.

Key words: ballari- DC-SS nakul- corona-investigation