ಗಸ್ತಿನಲ್ಲಿದ್ದ ಪೊಲೀಸ್ ಜೀಪ್ ಅಪಘಾತ : ಎಎಸ್ ಐ, ಹೆಡ್ ಕಾನ್ ಸ್ಟೇಬಲ್ ಸಾವು

ಮೈಸೂರು,ನವೆಂಬರ್,12,2020(www.justkannada.in) : ಜಿಲ್ಲೆಯ ಕೆ.ಆರ್‌.ನಗರ ತಾಲೂಕಿನಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್‌ ಜೀಪ್‌ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಎಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಸಾವಿಗೀಡಾಗಿದ್ದಾರೆ.kannada-journalist-media-fourth-estate-under-lossತಾಲ್ಲೂಕಿನ ಸಿದ್ದನಕೊಪ್ಪಲು ಗೇಟ್‌ ಬಳಿ ಈ ಘಟನೆ ನಡೆದಿದ್ದು, ಕೆ.ಆರ್.ನಗರ ಪೊಲೀಸ್‌ ಠಾಣೆಯ ಎಎಸ್‌ಐ ಮೂರ್ತಿ ಹಾಗೂ ಹೆಡ್‌ಕಾನ್‌ಸ್ಟೇಬಲ್‌ ಶಾಂತಕುಮಾರ್‌ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ.

ಬೆಳ್ಳಗಿನ ಜಾವ 3 ಗಂಟೆ ಸಮಯದಲ್ಲಿ ಜೀಪ್ ನಿಯಂತ್ರಣ ತಪ್ಪಿ ಅಪಘಾತ

ಇಲಾಖೆ ಜೀಪಿನಲ್ಲಿ ರಾತ್ರಿ ಸರ್ಕಲ್ ನೈಟ್ ರೌಂಡ್ ಕರ್ತವ್ಯ ನಿರ್ವಹಿಸಿಕೊಂಡು ಸಾಲಿಗ್ರಾಮ ಪೊಲೀಸ್ ಠಾಣೆಯ ಕಡೆಯಿಂದ ಕೆ.ಆರ್.ನಗರದ ಕಡೆಗೆ ಬರುತ್ತಿರುವಾಗ ಬೆಳ್ಳಗಿನ ಜಾವ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. Police-jeep-accident-patrol-ASI-headconstable- death

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರ ಶವಗಳನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಶವಗಾರ ಮತ್ತು ಘಟನಾ ಸ್ಥಳಕ್ಕೆ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಸೌತ್ ಡಿವೈಎಸ್ಪಿ ಸುಮಿತ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Police-jeep-accident-patrol-ASI-headconstable- death

English summary….

Police patrol jeep meets with mishap: ASI, Head Constable dies
Mysuru, Nov. 12, 2020 (www.justkannada.in): In a tragic incident, a police jeep which was on night patrol in K.R. Nagara Taluk met with an accident resulting in the death of Assistant Sub Inspector of Police and Head Constable.
The incident took place near the Siddanakoppalu gate, when they were returning to K.R. Nagara from Saligrama Police Station after completing the night rounds. The driver of the jeep lost control over the vehicle at around 3am and hit a roadside tree. The deceased are identified as Murthy, ASI and Shanthakumar, Head Constable, of K.R. Nagara Police Station.

key words : Police-jeep-accident-patrol-ASI-headconstable- death