ಮೈಸೂರು: ಜೀವ ಹೋಗುತ್ತಿದ್ದವನಿಗೆ ರಕ್ಷಕರಾಗಿ ಮಾನವೀಯತೆ ಮೆರೆದ ಆರಕ್ಷಕರು

ಎಚ್.ಡಿ.ಕೋಟೆಯ ಎಡತೊರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ.

ಮೈಸೂರು: ಅಪಘಾತದಲ್ಲಿ‌ ಗಾಯಗೊಂಡು ತೀವ್ರ ರಕ್ತಸ್ರವಾದಿಂದ ನರಳಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಆರಕ್ಷಕರು ರಕ್ಷಕರಾಗಿ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಎಡತೊರೆ ಬಳಿ ಬೈಕ್ ಸವಾರರಿಬ್ಬರು ಮುಖಾ ಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು , ಮತ್ತೋರ್ವ ಸ್ಥಿತಿ ಚಿಂತಾಜನಕವಾಗಿತ್ತು.
ಘಟನೆ ನಡೆದು ಗಂಟೆಗಳಾದರು ಅಂಬ್ಯುಲೆನ್ಸ್ ಬಾರದ ಕಾರಣ ತಕ್ಷಣ ಪೋಲಿಸ್ ಇಲಾಖೆಯ ಹೈವೆ ಪೆಟ್ರೋಲ್ ವಾಹನದ ದಫೆದಾರ್ ಗೋವಿಂದರಾಜು ಮತ್ತು ಎ ಎಸ್ ಐ
ಮರಿಗೌಡರವರು ಕಾರ್ಯಪ್ರವೃತ್ತಿಯಾಗಿ ಆತನನ್ನು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ವ್ಯಕ್ತಿಯ ಜೀವವನ್ನು ಉಳಿಸಿ ಮಾನವೀಯತೆ ಮೆರೆದಿದ್ದಾರೆ..