ಕೊಳೆತು ತುಂಡಾಗಿರುವ ಹಾಡಿಯಲ್ಲಿ ವಾಸವಿರುವ ವ್ಯಕ್ತಿಯ ಕಾಲಿನ ಬೆರಳು: ಚಿಕಿತ್ಸೆಗೆ ಸಹಾಯ ಹಸ್ತ ಕೋರಿಕೆ: ಚಿಕಿತ್ಸೆಗೆ ಸಹಾಯ ಹಸ್ತ ಕೋರಿಕೆ…

ಮೈಸೂರು, ಡಿಸೆಂಬರ್,18,2020(www.justkannada.in):  ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯ ಜಿಎಂ ಹಳ್ಳಿ ಹಾಡಿಯಲ್ಲಿ  ಬಸವರಾಜು ಎಂಬ 37 ವರ್ಷದ ವ್ಯಕ್ತಿಗೆ ಎರಡು ಕಾಲುಗಳ ಪಾದಗಳಲ್ಲಿ ಒಂದೊಂದು ಬೆರಳುಗಳು ಕೊಳೆತು ತುಂಡಾಗಿವೆ, ಉಳಿದ ಬೆರಳುಗಳು ವಿಚಿತ್ರ ರೀತಿಯಲ್ಲಿ ಗಾಯಗಳಾಗಿ ಕೊಳೆಯುತ್ತಿವೆ. ಹೀಗಾಗಿ ಈ ವ್ಯಕ್ತಿಗೆ ಚಿಕಿತ್ಸೆಯ ಅಗತ್ಯವಿದ್ದು ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಇಲಾಖೆಗಳು ಗಮನ ಹರಿಸುವಂತೆ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ ಮನವಿ ಮಾಡಿದ್ದಾರೆ.fragile-finger-person-mysore-hd-kote-requesting-help-with-treatment

ಈ ಕುರಿತು ಮನವಿ ಮಾಡಿರುವ ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ, ಬಸವರಾಜು ತುಂಬಾ ನೋವಿನಿಂದ ಬಾಧೆ ಅನುಭವಿಸುತ್ತಿದ್ದಾನೆ.  ನಾನು ತಾಲ್ಲೂಕಿನ ಮುಖ್ಯ ವೈದ್ಯರಾದ ರವಿ ಕುಮಾರ್ ಸರ್ ಗಮನಕ್ಕೂ ತಂದಿರುವೆ .ಅವರು ಸಂಚಾರಿ ವೈದ್ಯಕೀಯ ಚಿಕಿತ್ಸೆ ನೀಡಲು ವೈದ್ಯರನ್ನು ಹಾಡಿಗೆ ಕಳುಹಿಸುವದಾಗಿ ತಿಳಿಸಿದರು. ದಯವಿಟ್ಟು ಮಾನವೀಯ ಮೌಲ್ಯಗಳನ್ನು ಉಳಿಸುವ ಸಲುವಾಗಿ ಮಾನ್ಯ ಜಿಲ್ಲಾ ಆಡಳಿತಕ್ಕೆ ಸಂಬಂಧಿಸಿದ ಇಲಾಖೆಗಳಾದ  s p, DCRE  ಪರಿಶಿಷ್ಟ ಪಂಗಡಕ್ಕೆ ಸೇರಿದ Tribal department, ಸಮಾಜ ಕಲ್ಯಾಣ ಇಲಾಖೆ,  ಅರೋಗ್ಯ ಇಲಾಖೆ  ಸೇರಿದಂತೆ ಕಾರ್ಯನಿರ್ವಹಿಸುತ್ತವೆ.  ಇದನ್ನು ಗಮನಿಸಿ ಜಿಲ್ಲಾ ಕೇಂದ್ರದಿಂದ ಬದುಕನ್ನು ಉಳಿಸಲು ಸಂಪೂರ್ಣ ಸಹಕಾರ  ನೀಡಿ ಎಂದು ಕೋರಿದ್ದಾರೆ.fragile-finger-person-mysore-hd-kote-requesting-help-with-treatment

Key words: Fragile -finger – person- mysore –hd kote- requesting help-with treatment.