ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ …

ಬೆಳಗಾವಿ,ಡಿಸೆಂಬರ್,18,2020(www.justkannada.in) :  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಸಿದ್ಧರಾಮಯ್ಯ ನೋವು ತೋಡಿಕೊಂಡ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕೆಲಸ ಮಾಡಿ ಸೋತಾಗ ಯಾರಿಗಾದರೂ ಸರಿ ನೋವಾಗುತ್ತದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದು ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಆ ಕ್ಷೇತ್ರ ಅವರಿಗೆ ಪುನರ್ ಜನ್ಮ ಕೊಟ್ಟಿದೆ. ಸಿದ್ಧರಾಮಯ್ಯ ಅವರ ಹೇಳಿಕೆ ಅವರ ವೈಯಕ್ತಿಕವಾದದ್ದು ಎಂದರು.kpcc-president-dk-sivakumar-not-expect-lose-siddaramaiah-chamundeshwari-constituency

ಇನ್ನು  2ನೇ ಬಾರಿ ಸಿಎಂ ಆಗಲು ನಮ್ಮವರೇ ಬಿಡಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಹೆಸರು ಹೇಳಿದ್ರೆ ಹೇಳಬಹುದು. ಆದ್ರೆ ಅವರು ಸಾಮಾನ್ಯವಾಗಿ ಹೇಳಿದ್ದಾರೆ. ನನಗಂತೂ 2ನೇ ಬಾರಿ ಸಿಎಂ ಆಗಲಿ ಎಂಬುದಿತ್ತು. ನಾನು ಹುಣಸೂರಿಗೂ ಹೋಗಿ ಪ್ರಚಾರ ಮಾಡಿದ್ದೆ.  ರಾಹುಲ್ ಗಾಂಧಿ ಅವರು ಆಶೀರ್ವಾದಿಸಿದ್ರು. ಸಿದ್ಧರಾಮಯ್ಯ ಅವರು ಮಾಡಿದ ಕೆಲಸಕ್ಕೆ ಗೆಲ್ಲಬೇಕಿತ್ತು ಎಂದು ಹೇಳಿದರು.

Key words: KPCC president- DK Sivakumar – not expect –lose-siddaramaiah – Chamundeshwari constituency.