Saturday, August 15, 2026

BDA Apartments

Home Cinema ರಾಷ್ಟ್ರೀಯ ಪ್ರಶಸ್ತಿ: ರಕ್ಷಿತ್ ಶೆಟ್ಟಿ ಆ್ಯಂಡ್ ಟೀಂ ಫುಲ್ ಖುಷ್

ರಾಷ್ಟ್ರೀಯ ಪ್ರಶಸ್ತಿ: ರಕ್ಷಿತ್ ಶೆಟ್ಟಿ ಆ್ಯಂಡ್ ಟೀಂ ಫುಲ್ ಖುಷ್

ಬೆಂಗಳೂರು, ಮಾರ್ಚ್ 23, 2021 (www.justkannada.in): ಅವನೇ ಶ್ರೀಮನ್ನಾರಾಯಣ ಸೇರಿದಂತೆ ಕನ್ನಡಕ್ಕೆ ಐದು 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  ಲಭಿಸಿದೆ.

ಅವನೇ ಶ್ರೀಮನ್ನಾರಾಯಣ ಸಿನಿಮಾ ಶ್ರೇಷ್ಠ ಸಾಹಸ ಸಂಯೋಜನೆಗಾಗಿ ಪ್ರಶಸ್ತಿ ಪಡೆದಿದ್ದು, ‘ಅಕ್ಷಿ’ ಶ್ರೇಷ್ಠ ಕನ್ನಡ ಚಿತ್ರವೆಂಬ ಪ್ರಶಸ್ತಿಗೆ ಭಾಜನವಾಗಿದೆ.

ನಿರ್ದೇಶಕ ರಾಮದಾಸ್ ನಾಯ್ಡು ಬರೆದಿರುವ ಜಾಗತಿಕ ಸಿನಿಮಾ-ಪ್ರೇರಣೆ, ಪ್ರಭಾವ ಎಂಬ ಪುಸ್ತಕಕ್ಕೆ ಶ್ರೇಷ್ಠ ಸಿನಿಮಾ ವಿಮರ್ಶಾ ಗ್ರಂಥ ಪ್ರಶಸ್ತಿ ಲಭಿಸಿದೆ.

ವೈಲ್ಡ್ ಲೈಫ್ ಕರ್ನಾಟಕ ಶ್ರೇಷ್ಠ ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಶ್ರೇಷ್ಠ ನಿರೂಪಣೆ ಪ್ರಶಸ್ತಿ, ‘ಪಿಂಗಾರ’ ಸಿನಿಮಾಗೆ ಶ್ರೇಷ್ಠ ತುಳು ಚಿತ್ರವೆಂಬ ಪ್ರಶಸ್ತಿ ಸಿಕ್ಕಿದೆ.