26ಕ್ಕೆ ಅಮೆಜಾನ್ ಪ್ರೈಮ್’ನಲ್ಲಿ ಪೊಗರು ರಿಲೀಸ್

ಬೆಂಗಳೂರು, ಮಾರ್ಚ್ 23, 2021 (www.justkannada.in): ಪೊಗರು ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ.

ಮಾರ್ಚ್ 26 ರಂದು ಪೊಗರು ಆನ್ ಲೈನ್ ಪ್ಲಾಟ್ ಫಾರಂನಲ್ಲಿ ಬಿಡುಗಡೆಯಾಗುತ್ತಿದೆ. ಅಂದಹಾಗೆ ಥಿಯೇಟರ್ ನಲ್ಲಿ ಬಿಡುಗಡೆಯಾದ ಒಂದೇ ತಿಂಗಳಿಗೆ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ.

ಪೊಗರು ಥಿಯೇಟರ್ ನಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿದೆ. ಇದೀಗ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಲಿದೆ.

ಬಾಕ್ಸ್ ಆಫೀಸ್ ನಲ್ಲೂ ಪೊಗರು ಸಾಕಷ್ಟು ಗಳಿಕೆ ಕಂಡಿತ್ತು.