Friday, August 14, 2026

BDA Apartments

Home Cinema ಶಿವಣ್ಣ ಮನೆಗೆ ಶಸ್ತ್ರ ಸಜ್ಜಿತ ಪೊಲೀಸ್ ಭದ್ರತೆ

ಶಿವಣ್ಣ ಮನೆಗೆ ಶಸ್ತ್ರ ಸಜ್ಜಿತ ಪೊಲೀಸ್ ಭದ್ರತೆ

ಬೆಂಗಳೂರು, ಮಾರ್ಚ್ 23, 2021 (www.justkannada.in): ನಟ ಶಿವರಾಜ್ ಕುಮಾರ್ ಮನೆಗೆ ಶಸ್ತ್ರ ಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಜೀವ ಬೆದರಿಕೆ ಹಿನ್ನಲೆಯಲ್ಲಿ ಭದ್ರತೆಗಾಗಿ ಶಿವಣ್ಣ ಅವರ ಮನೆಗೆ ನಾಲ್ವರು ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.

ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಿಂದಲೂ ಇಬ್ಬರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಂದಹಾಗೆ ಇತ್ತೀಚಿಗೆ ಶಿವಣ್ಣ, ಬಿಟಿ ಲಲಿತಾ ನಾಯಕ್, ಸಿಟಿ ರವಿಗೆ ಪತ್ರ ಮುಖೇನ ಜೀವ ಬೆದರಿಕೆ ಬಂದಿತ್ತು.

ಮೇ 1ರಂದು ಈ ಗಣ್ಯರ ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಬಂದಿತ್ತು. ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.