ಮತ್ತೆ ತೆರೆ ಮೇಲೆ ‘ತಲೈವಿ’ ನೋಡಲು ರೆಡಿಯಾಗಿ! ಇಂದು ಟ್ರೈಲರ್ ರಿಲೀಸ್

ಬೆಂಗಳೂರು, ಮಾರ್ಚ್ 23, 2021 (www.justkannada.in): 

ಇಂದು ಬಹು ನಿರೀಕ್ಷಿತ ತಲೈವಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ.

ನಟಿ ಕಂಗನಾ ರಣಾವತ್​ ಅವರ ಜನ್ಮ ದಿನದ ಗಿಫ್ಟ್ ಆಗಿ ಚೆನ್ನೈ ಮತ್ತು ಮುಂಬೈನಲ್ಲಿ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ.

ಚಿತ್ರದಲ್ಲಿ ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.

ಜೀವನಾಧಾರಿತ ಚಿತ್ರದ ಚಿತ್ರೀರಿಕರಣದ ಸಮಯದಲ್ಲಿ 20 ಕೆ.ಜಿ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಕೆಲವೇ ತಿಂಗಳುಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳುವುದು ನಾನು ಎದುರಿಸಿದ ಸವಾಲಾಗಿತ್ತು ಎಂದು ಕಂಗನಾ ಬರೆದುಕೊಂಡಿದ್ದಾರೆ.