ಟೀಂ ಇಂಡಿಯಾ ಓಪೆನರ್ ಯಾರು? ಗೊಂದಲಗಳಿಗೆ ತೆರೆ ಎಳೆದ ಕ್ಯಾಪ್ಟನ್ ಕೊಹ್ಲಿ

ಬೆಂಗಳೂರು, ಮಾರ್ಚ್ 23, 2021 (www.justkannada.in):

ಏಕದಿನ ಸರಣಿಯಲ್ಲಿ ರೋಹಿತ್​ ಮತ್ತು ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ಕೊಹ್ಲಿ ಖಚಿತ ಪಡಿಸಿದ್ದಾರೆ.

ಟಿ20 ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ರಾಹುಲ್​ ಜೊತೆಗೆ ಧವನ್, ಇಶಾನ್ ಕಿಶನ್, 3 ಮತ್ತು 4ನೇ ಪಂದ್ಯಕ್ಕೆ ರೋಹಿತ್​ ಜೊತೆಗಾರರಾಗಿದ್ದರು.

ಕೊನೆಯ ಪಂದ್ಯದಲ್ಲಿ ರಾಹುಲ್​ಗೆ ವಿಶ್ರಾಂತಿ ನೀಡಿ ಸ್ವತಃ ಕೊಹ್ಲಿಯೇ ರೋಹಿತ್ ಜೊತೆಗೂಡಿ ಆಡಿದ್ದರು. ಈ ಕುರಿತ ಗೊಂದಲಗಳಿಗೆ ಕೊಯ್ಲಿ ತೆರೆ ಎಳೆದಿದ್ದಾರೆ.

ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಖಂಡಿತವಾಗಿಯೂ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಆಡುತ್ತಾರೆ. ಇದರಲ್ಲಿ ಅನುಮಾನವೇ ಬೇಡ ಎಂದು ಕೊಯ್ಲಿ ತಿಳಿಸಿದ್ದಾರೆ.