ಇಂದಿನಿಂದ ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಪುಣೆಯಲ್ಲಿ ಮೊದಲ ಫೈಟ್

ಬೆಂಗಳೂರು, ಮಾರ್ಚ್ 23, 2021 (www.justkannada.in): ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಲಿದೆ.

ಪುಣೆ ಮೈದಾನದಲ್ಲಿ ಇಂದು ಮೊದಲ ಪಂದ್ಯ ಹಗಲು-ರಾತ್ರಿಯಾಗಿ ನಡೆಯಲಿದೆ. ಮೂರೂ ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಎಲ್ಲಾ ಪುಣೆಯಲ್ಲೇ ನಡೆಯಲಿವೆ.

ಟಿ20 ಸರಣಿಯಲ್ಲಿ ಆಡಿದ್ದ ತಂಡವನ್ನೇ ಭಾರತ ಏಕದಿನ ಸರಣಿಗೂ ಕಣಕ್ಕಿಳಿಸುವ ಸಾಧ್ಯತೆಯಿದೆ. ಪಂದ್ಯ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.