Tuesday, August 4, 2026

BDA Apartments

Home Front Page ತಮ್ಮ ಜೀವನದಲ್ಲಿ ಮದ್ಯ ಸೇವನೆ ಮಾಡಿಲ್ಲ ಎಂದು ಪ್ರಮಾಣ ಮಾಡಿ ಹೇಳಲಿ- ಸಿದ್ದರಾಮಯ್ಯಗೆ ಹೀಗೆ ಸವಾಲು...

ತಮ್ಮ ಜೀವನದಲ್ಲಿ ಮದ್ಯ ಸೇವನೆ ಮಾಡಿಲ್ಲ ಎಂದು ಪ್ರಮಾಣ ಮಾಡಿ ಹೇಳಲಿ- ಸಿದ್ದರಾಮಯ್ಯಗೆ ಹೀಗೆ ಸವಾಲು ಹಾಕಿದ್ದು ಯಾರು ಗೊತ್ತೆ..?

ಮೈಸೂರು,ಜುಲೈ,30,2021(www.justkannada.in): ಗಾಂಧೀಜಿ ಮಗ ಕುಡುಕನಾಗಿದ್ದ ಅವರಿಗೆ ತಂದೆಯ ಗುಣ ಬರಲಿಲ್ಲ. ಹಾಗೆಯೇ ಎಸ್.ಆರ್.ಬೊಮ್ಮಾಯಿ ಗುಣ ಕೋಮುವಾದಿ ಪಕ್ಷದಲ್ಲಿರುವ ಬೊಮ್ಮಾಯಿಗೆ ಬರುತ್ತಾ ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮಾಧ್ಯಮ ವಕ್ತಾರ ಜಿ.ಮಹೇಶ್ ಸವಾಲು ಹಾಕಿದ್ದಾರೆ.

ಮೈಸೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಧ್ಯಮ ವಕ್ತಾರ ಜಿ.ಮಹೇಶ್, ಸಿದ್ದರಾಮಯ್ಯ ತಮ್ಮ ಜೀವನದಲ್ಲಿ ಮದ್ಯೆ ಸೇವನೆ ಮಾಡಿಲ್ಲ ಎಂದು ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ವಹಿಸಿದ ಕೇವಲ ಒಂದು ಗಂಟೆಯಲ್ಲೇ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಒಬ್ಬ ಸುದೀರ್ಘ ರಾಜಕಾರಣದಲ್ಲಿರುವ ಅವರು ಬಾಲಿಶ ಹೇಳಿಕೆ ನೀಡಬಾರದು. ಸಿಎಂ ಬೊಮ್ಮಾಯಿ ಅವರು ಅಧಿಕಾರ ವಹಿಸಿದ ಕೇವಲ 2 ಗಂಟೆಯಲ್ಲೇ ಹಲವು ಯೋಜನೆಗಳನ್ನ ಜಾರಿಗೊಳಿಸಿದ್ರು. ಇದು ಮಾತ್ರ ಸಿದ್ದರಾಮಯ್ಯಗೆ ನೆನಪಿಗೆ ಬರಲಿಲ್ಲ. ಅತ್ಯಂತ ಕ್ಷುಲ್ಲಕ ಹೇಳಿಕೆ ನೀಡುವ ಸಿದ್ದರಾಮಯ್ಯಗೆ ಬುದ್ದಿಭ್ರಮಣೆಯಾಗಿದೆ. ಅನುವಂಶೀಯತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮೊದಲು ತಮ್ಮ ವಂಶಾವಳಿಯನ್ನ ಪರಿಶೀಲಿಸಲಿ. ಸಿದ್ದರಾಮಯ್ಯ ಹೈಕಮಾಂಡ್ ನಿಂದ ಛೀಮಾರಿಗೆ ಒಳಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇನ್ನಾದರೂ ಸಿದ್ದರಾಮಯ್ಯನವರು ತಮ್ಮ ವರ್ತನೆ ಬದಲಿಸಿಕೊಳ್ಳಲಿ ಎಂದುಬಿಜೆಪಿ ಮಾಧ್ಯಮ ವಕ್ತಾರ ಜಿ. ಮಹೇಶ್ ವಾಗ್ದಾಳಿ ನಡೆಸಿದರು.

Key words: former CM-Siddaramaiah- challenge-BJP-spokesperson-G.Mahesh