Saturday, October 17, 2026

Dasara Wishes

Happy Dasara
Home Front Page ಭೋವಿ ಜನಾಂಗದ ಮಹಿಳೆಯರನ್ನು  ಒಟ್ಟಗೂಡಿಸಿ ಸಂಘ ರಚಿಸಿ- ರಾಮಪ್ಪ ಎಂ

ಭೋವಿ ಜನಾಂಗದ ಮಹಿಳೆಯರನ್ನು  ಒಟ್ಟಗೂಡಿಸಿ ಸಂಘ ರಚಿಸಿ- ರಾಮಪ್ಪ ಎಂ

ಮೈಸೂರು, ಮೇ.26,2026 (www.justkannada.in): ಭೋವಿ ಜನಾಂಗದ ಮಹಿಳೆಯರನ್ನು  ಒಟ್ಟಗೂಡಿಸಿ ಸಂಘ ರಚಿಸಿ, ಅವರಿಗೆ ಸರ್ಕರದ ಸಾಲ ಯೋಜನೆಗಳನ್ನು ಒದಗಿಸಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬಹುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಎಂ‌ ಅವರು ತಿಳಿಸಿದರು.

ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ರಾಮಪ್ಪ ಎಂ‌ ಮಾತನಾಡಿದರು. ಮೈಕ್ರೋ ಕ್ರೆಡಿಟ್ ಯೋಜನೆಯಡಿ ಭೋವಿ ಜನಾಂಗದ ಕನಿಷ್ಠ 10 ಮಹಿಳಾ ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಉತ್ಪದನಾ ಚಟುವಟಿಕೆಗೆ 2.50 ಲಕ್ಷ ಸಹಾಯಧನ ಮತ್ತು  2.50 ಲಕ್ಷ ಸಾಲವಾಗಿರುತ್ತದೆ. ಭೋವಿ ಜನಾಂಗದ ಹೆಣ್ಣು ಮಕ್ಕಳು ಈ ಯೋಜನೆ ಪಡೆಯಲು ಮುಂದೆ ಬರಬೇಕು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಭೋವಿ ಜನಾಂಗದ ಮುಖ‍ಂಡರು ಮಹಿಳೆಯರಿಗೆ ಮಾಹಿತಿ ನೀಡಿ ಅವರನ್ನು ಯೋಜನೆ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು‌.ಭೋವಿ ಜನಾಂಗದ ಮಹಿಳೆಯರನ್ನು ಒಟ್ಟಗೂಡಿಸಿ ಸಂಘ ರಚಿಸಿ- ರಾಮಪ್ಪ ಎಂ bhovi1

ಭೋವಿ ಜನಾಂಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ.  ದಾಖಲಾತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟಲ್ ವ್ಯವಸ್ಥೆ ಸಿಗಲಿದೆ. ಕಾಲೇಜು, ಶಾಲೆಗಳಿಗೆ ದಾಖಲಾತಿ ಪ್ರಾರಂಭವಾಗಿದ್ದು, ಜಾತಿ ಪ್ರಮಾಣಪತ್ರವನ್ನು ವಿಳಂಭವಾಗದಂತೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳ ಪಟ್ಟ ಬ್ಯಾಂಕ್ ವರು  ಲೀಡ್ ಬ್ಯಂಕ್ ವ್ಯವಸ್ಥಾಪಕರಿಗೆ ನೀಡಿದರೆ, ಸಾಲ ನೀಡಲು ಬ್ಯಾಂಕ್ ನಿರಾಕರಿಸಿದರೆ, ನಿರಾಕರಿಸಿದಕ್ಕೆ ನಿಖರ ಮಾಹಿತಿ ದೊರಕುತ್ತದೆ ಎಂದರು.

ಭೋವಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಯ್ಕೆ ಮಾಡಲಾಗುವುದು. ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಶೇ 100 ರಷ್ಟು ಸಾಧನೆ ಮಾಡಬೇಕು. ಭೋವಿ ಜನಾಂಗದ ಮುಖಂಡರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹೆಚ್ಚು ಜನರು ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳಿ ಎಂದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ  ಚಂದ್ರ ನಾಯಕ್ ಅವರು ಮಾತನಾಡಿ ಭೋವಿ ಅಭಿವೃದ್ಧಿ ನಿಗಮವನ್ನು 2016  ರಲ್ಲಿ ಸ್ಥಾಪನೆ ಮಾಡಲಾಯಿತು. ನಿಗಮದಿಂದ  ಸೌಲಭ್ಯ ಪಡೆಯಲು ಭೋವಿ, ಒಡ್, ಒಡ್ಡೆ, ಒಡ್ಡರ್, ವಡ್ಡರ್, ವಡ್ಡರ, ಕಲ್ಲು ಒಡ್ಡರ, ಗೋವಿ(ನಾನ್ ಗೋಸ್ಟ್) Govi (non gosta), ಮಣ್ಣು ವಡ್ಡರ ಒಟ್ಟು 9 ಜಾತಿಗಳಿಗೆ ಸೇರಿದ ವ್ಯಕ್ತಿಗಳಾಗಿರಬೇಕು. ವಿವಿಧ ರೀತಿಯ ಸಾಲ ಸೌಲಭ್ಯ ಒದಗಿಸಿ ಅವರ ಆರ್ಥಿಕ ಮಟ್ಟ ಸುಧಾರಿಸುವುದು ನಿಗಮದ ಉದ್ದೇಶವಾಗಿದೆ.   ಇದಲ್ಲದೇ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖೆಯ ಎಸ್.ಸಿ‌ಎಸ್.ಪಿ ಯೋಜನೆಯಡಿ ರೂಪಿಸಿರುವ ಸೌಲಭ್ಯಗಳನ್ನು ಸಹ ಪಡೆಯಬಹುದು ಎಂದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ನೀಡಲಾಗುವ ಸ್ವಯಂ ಉದ್ಯೋಗ ನೇರಸಾಲ ಯೋಜನೆ,ಕುರಿ/ ಮೇಕೆ ಸಾಕಾಣಿಕೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜಬೆ, ಹೈನುಗಾರಿಕೆ, ಸ್ವಾವಲಂಭಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯ ಉಪಯುಕ್ತತೆಯ ಬಗ್ಗೆ ವಿವರಿಸಿದರು.

ಭೋವಿ ಜನಾಂಗದವರು ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು

2011 ರ  ಜನಗಣತಿಯ ಪ್ರಕಾರ  ಭೋವಿ ಜನಾಂಗದ 11.20 ಲಕ್ಷ ಜನಸಂಖ್ಯೆ ಇದ್ದು, ಮೈಸೂರು ಜಿಲ್ಲೆಯಲ್ಲಿ 14,376 ಗಂಡಸರು, 14202 ಮಹಿಳೆಯರು ಸೇರಿದಂತೆ ಒಟ್ಟು 28578 ಜನರಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಯುಕೇಶ್ ಕುಮಾರ್ ಅವರು ಮಾತನಾಡಿ ಈವರೆಗೆ ಬ್ಯಾಂಕ್ ನಿಂದ ಸಾಲ ಪಡೆಯದೇ ಇರುವ ಫಲಾನುಭವಿಗಳ ಸಿಬಿಲ್ ಸ್ಕೋರ್  ಶೂನ್ಯ ಇರುತ್ತದೆ ಇದು ಸಾಲ ಪಡೆಯಲು ಸಮಸ್ಯೆಯಾಗುವುದಿಲ್ಲ. ಭೋವಿ ನಿಗಮದವರು  ಯೋಜನೆವಾರು  ನೋಡಲ್ ಅಧಿಕಾರಿ ನೇಮಕ ಮಾಡಿ ಫಲಾನುಭವಿಗಳು ಹಾಗೂ ಬ್ಯಾಂಕ್ ನೊಂದಿಗೆ ಸಮನ್ವಯ ಕೆಲಸ ನಿರ್ವಹಿಸಬೇಕು. ಬ್ಯಾಂಕ್ ನಿಂದ ಸಾಲ ನೀಡಲು ನಿರಾಕರಣೆಯಾದರೆ ನಿಖರವಾದ ಕಾರಣ ಸಿಗುತ್ತದೆ ಹಾಗೂ ಸಮಸ್ಯೆ ಇದ್ದಲಿ ಸರಿಪಡಿಸಬಹುದು, ಶೇ 100 ರಷ್ಟು ಗುರಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಭೋವಿ ಜನಾಂಗದ ಮಹಿಳೆಯರನ್ನು ಒಟ್ಟಗೂಡಿಸಿ ಸಂಘ ರಚಿಸಿ jk02_new jk02 new

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್, ಉಪ ಪೊಲೀಸ್ ಆಯುಕ್ತೆ ಕರ್ನಾಟಕ ಕಾನೂನು ಸುವ್ಯವಸ್ಥೆ ಡಿಸಿಪಿ  ಹರ್ಷ ಪ್ರಿಯಂವದ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಭೀಮಪ್ಪ ಕೆ ಲಾಳಿ ಚೆಸ್ಕಾಂ ಚೀಫ್ ಇಂಜಿನಿಯರ್ ಸುನೀಲ್  ಭೋವಿ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

Key words: Form, association, Bhovi community,  Ramappa M