Saturday, October 17, 2026

Dasara Wishes

HD Kumaraswamy DasraWishes_JK DasraWishes JK
Happy Dasara
Home Front Page ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’

ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’

ಮೈಸೂರು,ಮೇ,26,2026 (www.justkannada.in): ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ಭರತನಾಟ್ಯಂ ರಂಗಪ್ರವೇಶ ಕಾರ್ಯಕ್ರಮವನ್ನ ಮೈಸೂರಿನಲ್ಲಿ ಆಯೋಜಿಸಲಾಗಿದೆ.

ಅಂದು ಸಂಜೆ 5.20ಕ್ಕೆ ನಗರದ ಜಗನ್ನಾಥ ಸೆಂಟರ್ ಫಾರ್ ಅರ್ಟ್ ಅಂಡ್ ಕಲ್ಚರ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ,  ಮೈಸೂರು ಅರಮನೆ ಮಂಡಳಿ  ಉಪನಿರ್ದೇಶಕ ಟಿ.ಎಸ್ ಸುಬ್ರಮಣ್ಯ, ಕಲಾಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಸಂದೇಶ್ ಭಾರ್ಗವ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗುರು ವಿದುಷಿ ಮಿತ್ರಾ ನವೀನ್ ಮತ್ತು ಎಂ.ಎಸ್ ನವೀನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಮೈಸೂರಿನಲ್ಲಿ ಬೆಳೆದ ದೀಕ್ಷಿತಾ ವೇಣುಗೋಪಾಲ್, ಭರತನಾಟ್ಯದ ಮಾರ್ಗವನ್ನು ಶಿಸ್ತು, ಸೌಂದರ್ಯ ಮತ್ತು ಆಳವಾದ ಭಕ್ತಿಯಿಂದ ಅನುಸರಿಸುತ್ತಿದ್ದಾರೆ. ಹತ್ತನೇ ವಯಸ್ಸಿನಲ್ಲಿ ಗುರು ವಿದುಷಿ ಮಿತ್ರಾ ನವೀನ್ ಅವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸವನ್ನು ಆರಂಭಿಸಿದ ಅವರು, ನಾದವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡಾನ್ಸ್‌ ನಲ್ಲಿ ವಿದ್ವಾನ್ ಎಂ.ಎಸ್. ನವೀನ್ ಅವರಿಂದ ಕರ್ಣಾಟಕ ಸಂಗೀತದ ತರಬೇತಿಯನ್ನು ಸಹ ಪಡೆದಿದ್ದಾರೆ.ಮೇ 30 ರಂದು ದೀಕ್ಷಿತಾ ವೇಣುಗೋಪಾಲ್ ಅವರ ‘ಭರತನಾಟ್ಯಂ ರಂಗಪ್ರವೇಶ’ jk02_new jk02 new

Key words: Dikshitha Venugopal, ‘Bharatanatyam Rangapravesha, Mysore