ಹುಬ್ಬಳ್ಳಿ,ಅಕ್ಟೋಬರ್,10,2026 (www.justkannada.in): ಕಬ್ಬು ಬೆಳೆಗೆ ಎಂಎಸ್ ಪಿ ನಿಗದಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಬಂದರೆ ಮತ್ತೊಮ್ಮೆ ಅವರ ಚರ್ಚಿಸಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆವೇಶ ಸಿಟ್ಟಿನಲ್ಲಿ ರೈತರು ಏನೋ ಮಾತನಾಡಿರುತ್ತಾರೆ. ಅದರ ಬಗ್ಗೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಮತ್ತೊಮ್ಮೆ ರೈತರು ಬಂದರೆ ಅವರ ಜೊತೆ ಚರ್ಚಿಸುತ್ತೇನೆ ಎಂದರು.
ಹಬ್ಬದ ಸಮಯದಲ್ಲಿ ದಯವಿಟ್ಟು ರೈತರು ಮನೆಗೆ ಹೋಗಬೇಕು. ಮನೆಗೆಳಿಗೆ ಹೋಗಿ ಹಬ್ಬ ಆಚರಿಸುವಂತೆ ನಮ್ಮ ಕೇಂದ್ರ ಸರ್ಕಾರ ತಕ್ಷಣ ಕಮಿಟಿಯನ್ನ ರಾಜ್ಯಕ್ಕೆ ಕಳಿಸಲಾಗುತ್ತೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.






