Saturday, September 5, 2026

BDA Apartments

Home Front Page ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ- ಆರ್.ವಿ ದೇಶಪಾಂಡೆ

ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ- ಆರ್.ವಿ ದೇಶಪಾಂಡೆ

ಬೆಂಗಳೂರು,ಮೇ,26,2026 (www.justkannada.in): ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿದ್ದು ಈ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೈಕಮಾಂಡ್ ನಾಯಕರು ಸಭೆ ನಡೆಸಿ ಚರ್ಚಿಸುತ್ತಿರುವುದು ತೀವ್ರ ಕುತೂಹಲವನ್ನುಂಟು ಮಾಡಿದೆ.

ಸಂಪುಟ ಪುನಾರಚನೆ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಸಚಿವ ಸಂಪುಟ ಸಂಪುಟ ವಿಸ್ತರಣೆ ಮಾಡಬೇಕಾಗಿದೆ.  ಈ ಬಗ್ಗೆ ಸಭೆಯ ಚರ್ಚಿಸಬಹುದು. ನಾನು ಹಿರಿಯ ನಾಯಕನಾಗಿದ್ದೇನೆ. ಮಂತ್ರಿ ಆಗಿದ್ದೇನೆ.  ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ತಿಳಿಸಿದರು.

ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದ ಸಂಘಟನೆ, ಸರ್ಕಾರದ ಕೆಲಸಕ್ಕೆ ಕರೆದಿರಬಹುದು ಎಂದು ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.

Key words:  not, aspirant, ministerial post, R.V. Deshpande