ಕೊರೊನಾಗೆ ದಾವಣಗೆರೆಯಲ್ಲಿ ಮೊದಲ ಬಲಿ

ದಾವಣಗೆರೆ, ಮೇ 02, 2020 (www.justkannada.in): ಕೊರೊನಾಗೆ ದಾವಣಗೆರೆಯಲ್ಲಿ ಮೊದಲ ಬಲಿಯಾಗಿದೆ.

ನಿನ್ನೆ ರಾತ್ರಿ 69 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ನಗರದ ಜಾಲಿನಗರ ನಿವಾಸಿಯಾಗಿದ್ದ ಈ ವೃದ್ಧ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿತ್ತು. ವೈರಸ್ ಪತ್ತೆಯಾದ ಒಂದೇ ದಿನದಲ್ಲಿ ವೃದ್ಧ ಮೃತಪಟ್ಟಿದ್ದಾರೆ.

ಇವರಿಂದ ಇತರ 5 ಮಂದಿಗೂ ಸೋಂಕು ತಗುಲಿತ್ತು. ಇವರ 3 ಸೊಸೆಯಂದಿರು, ಒಬ್ಬ ಮಗ ಸೇರಿದಂತೆ ಒಂದು ವರ್ಷದ ಮೊಮ್ಮಗನಿಗೂ ಸೋಂಕು ತಗುಲಿದ್ದು, ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.