ಸಿಎಂ ಯಡಿಯೂರಪ್ಪಇನ್ಮುಂದೆ ಗೋಪೂಜೆ ಮಾಡದೇ ಮನೆಯಿಂದ ಹೊರಬರಲ್ಲ!

ಬೆಂಗಳೂರು, ಮೇ 02, 2020 (www.justkannada.in): ಸಿಎಂ ಯಡಿಯೂರಪ್ಪ ತಮ್ಮ ಮನೆಗೆ ಇಬ್ಬರು ಹೊಸ ಅತಿಥಿಗಳನ್ನು ಬರಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಜ್ಯೋತಿಷ್ಯಗಳ ಸಲಹೆ!

ಜ್ಯೋತಿಷಿಗಳು ಸಿಎಂ ಯಡಿಯೂರಪ್ಪಗೆ ಪ್ರತಿನಿತ್ಯ ಬೆಳಿಗ್ಗೆ ಗೋವುಗಳ ಪೂಜೆ ನಡೆಸಿ ಮನೆಯಿಂದ ಹೊರಹೋಗಲು ಸಲಹೆ ನೀಡಿದ್ದರಂತೆ. ಅದರಂತೆ ಸಿಎಂ ತಮ್ಮ ನಿವಾಸಕ್ಕೆ ಗಿರ್ ತಳಿಯ ಎರಡು ಗೋವುಗಳನ್ನು ಬರಮಾಡಿಕೊಂಡಿದ್ದಾರೆ.

ಇನ್ನು ಮುಂದೆ ಸಿಎಂ ಪ್ರತಿನಿತ್ಯ ಈ ಗೋವುಗಳಿಗೆ ಪೂಜೆ ಸಲ್ಲಿಸಿ ನಿತ್ಯದ ಕೆಲಸಗಳಿಗೆ ತೆರಳಲಿದ್ದಾರಂತೆ.