ಕೋರೋನಾ: ಅಮೆರಿಕಾದಲ್ಲಿ ನಿಲ್ಲದ ಸಾವಿನ ಸರಣಿ

ವಾಷಿಂಗ್ಟನ್ , ಮೇ 02, 2020 (www.justkannada.in): ಅಮೆರಿಕದಲ್ಲಿ ಕಳೆದ 24 ಗಂಟೆಗಲಲ್ಲಿ ಕೊರೋನಾ ವೈರಸ್ ಮಹಾಮಾರಿಗೆ 1,883 ಮಂದಿ ಬಲಿಯಾಗಿದ್ದಾರೆ.

ಕಳೆದ 24 ತಾಸಿನಲ್ಲಿ ಅಮೆರಿಕದಲ್ಲಿ ದಾಖಲೆಯ 29,515 ಪ್ರಕರಣಗಳು ವರದಿಯಾಗಿದ್ದರೆ, ಹಿಂದಿನ ದಿನ 27,327 ಪ್ರಕರಣಗಳು ದೃಢಪಟ್ಟಿದ್ದವು.

ಕಳೆದೊಂದು ದಿನದಲ್ಲಿ 1,883 ಮಂದಿ ಮಾರಕ ಸೋಂಕಿನಿ0ದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 65,435ಕ್ಕೇರಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಕೊರೊನವೈರಸ್ ಸಂಪನ್ಮೂಲ ಕೇಂದ್ರ ಈ ಕುರಿತು ಮಾಹಿತಿ ನೀಡಿದೆ.