Monday, September 21, 2026

BDA Apartments

ಶೂಟಿಂಗ್ ವೇಳೆ ಫೈಟರ್ ಸಾವು: ಗುರು ದೇಶಪಾಂಡೆ ಸೇರಿ ಐವರ ವಿರುದ್ಧ ಎಫ್ಐಆರ್ BDA JK_...
Home Cinema ಶೂಟಿಂಗ್ ವೇಳೆ ಫೈಟರ್ ಸಾವು: ಗುರು ದೇಶಪಾಂಡೆ ಸೇರಿ ಐವರ ವಿರುದ್ಧ ಎಫ್ಐಆರ್

ಶೂಟಿಂಗ್ ವೇಳೆ ಫೈಟರ್ ಸಾವು: ಗುರು ದೇಶಪಾಂಡೆ ಸೇರಿ ಐವರ ವಿರುದ್ಧ ಎಫ್ಐಆರ್

ಬೆಂಗಳೂರು, ಆಗಸ್ಟ್ 10, 2021 (www.justkannada.in): ಚಿತ್ರದ ಶೂಟಿಂಗ್ ವೇಳೆ ಫೈಟರ್​​ ಸಾವು ಪ್ರಕರಣ ಸಂಬಂಧ ಐವರ ವಿರುದ್ಧ ದೂರು ದಾಖಲಾಗಿದೆ.

ಚಿತ್ರದ ನಿರ್ದೇಶಕ ಶಂಕರ, ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ, ಚಿತ್ರದ ಸಾಹಸ ನಿರ್ದೇಶಕ ವಿನೋದ್ ಕುಮಾರ್, ಚಿತ್ರದ ಉಸ್ತುವಾರಿ ಪರ್ನಾಂಡಿಸ್ ಚಿತ್ರದ ಕ್ರೇನ್ ಅಪರೇಟರ್ ಮಹದೇವ ವಿರುದ್ಧ ಕೇಸ್ ದಾಖಲಾಗಿದೆ.

ಬಿಡದಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ರಾಮನಗರ ತಾಲೂಕಿನ ಜೋಗನಪಾಳ್ಯದ ಬಳಿ ನಡೆಯುತ್ತಿದ್ದ ಲವ್​​ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ವಿದ್ಯುತ್​ ಅವಘಡದಿಂದ ಫೈಟರ್​ ವಿವೇಕ್(28) ಸಾವನ್ನಪ್ಪಿದ್ದರು.