Tuesday, September 22, 2026

BDA Apartments

ಹೊಸ ಯೋಜನೆ ಘೋಷಣೆ ಸುಳಿವು ನೀಡಿದ ಸಚಿವ ಸೋಮಣ್ಣ BDA JK_Adv BDA Adv
Home Front Page ಹೊಸ ಯೋಜನೆ ಘೋಷಣೆ ಸುಳಿವು ನೀಡಿದ ಸಚಿವ ಸೋಮಣ್ಣ

ಹೊಸ ಯೋಜನೆ ಘೋಷಣೆ ಸುಳಿವು ನೀಡಿದ ಸಚಿವ ಸೋಮಣ್ಣ

ಮಂಡ್ಯ, ಆಗಸ್ಟ್ 10, 2021 (www.justkannada.in): ಸ್ವಾತಂತ್ರ್ಯ ದಿನಾಚರಣೆ ದಿನ ಹೊಸ ಯೋಜನೆ ಘೋಷಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಸೋಮಣ್ಣ15 ರಿಂದ 20 ದಿನದಲ್ಲಿ ಸರ್ಕಾರ ಟೇಕಾಫ್ ಆದ ಭಾವನೆ ಬರಲಿದೆ ಎಂದು ಹೇಳಿದ್ದಾರೆ.

ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಈಗ ಮತ್ತೊಂದು ಹೊಸ ಯೋಜನೆ ಜಾರಿ ಬಗ್ಗೆ ಸೋಮಣ್ಣ ಸುಳಿವು ನೀಡಿದ್ದಾರೆ ಎನ್ನಲಾಗಿದೆ.

 

ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಸೋಮಣ್ಣ, ಯಾರೂ ನಿರೀಕ್ಷೆ ಮಾಡದಂತಹ ಯೋಜನೆಯನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.