Friday, September 18, 2026

BDA Apartments

ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದ ರಿಕ...
Home Front Page ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದ ರಿಕಿ ಪಾಂಟಿಂಗ್

ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದ ರಿಕಿ ಪಾಂಟಿಂಗ್

ಲಂಡನ್, ಮೇ 20, 2019 (www.justkannada.in): 2019ರಲ್ಲಿ ಎಲ್ಲಾ ತಂಡಗಳನ್ನು ಅವಲೋಕಿಸಿದರೆ ಇಂಗ್ಲೆಂಡೆ ಹೆಚ್ಚು ಬಲಿಷ್ಠವಾಗಿದೆ. ಹೀಗಾಗಿ ಆತಿಥೇಯ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲಲಿದೆ ಎಂದು ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಕಳೆದ 2 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡಕ್ಕೆ ತವರಿನ ಕಂಡೀಷನ್ ಕೂಡ ನೆರವಾಗಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ರೌಂಡ್ ರಾಬಿನ್ ಶೈಲಿಯ ಹೋರಾಟ ಇರೋದರಿಂದ ಎಲ್ಲಾ ತಂಡಗಳ ವಿರುದ್ಧ ಹೋರಾಟದಲ್ಲಿ ಇಂಗ್ಲೆಂಡ್‌ಗೆ ಅವಕಾಶಗಳು ಹೆಚ್ಚು. ಎಲ್ಲಾ ತಂಡಗಳನ್ನು ಮಣಿಸುವ ಸಾಮರ್ಥ್ಯ ಇಂಗ್ಲೆಂಡ್‌ಗೆ ಇದೆ ಎಂದಿದ್ದಾರೆ.