Friday, July 31, 2026

BDA Apartments

Home Crime ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ: 6 ಮಂದಿ ಅರೆಸ್ಟ್: ಸ್ಥಳದಲ್ಲಿ ಪೊಲೀಸರ ನಿಯೋಜನೆ…

ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ: 6 ಮಂದಿ ಅರೆಸ್ಟ್: ಸ್ಥಳದಲ್ಲಿ ಪೊಲೀಸರ ನಿಯೋಜನೆ…

ಮೈಸೂರು,ಮೇ,20,2019(www.justkannada.in): ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಆರು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಮಂಡಿಮೊಹಲ್ಲಾದ ಚಿಕ್ಕ ಮಾರುಕಟ್ಟೆ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.  ವಿಜಯಕುಮಾರ್, ಯಶವಂತ್, ಪ್ರಶಾಂತ್, ಮದಮದ್ ಪರ್ವೀಜ್, ಪರ್ಹಾನ್ ಹಾಗೂ ರಿಯಾನ್ ಬಂಧಿತರು ಅಂಗಡಿ ಮುಂದೆ ಬೊಂಬೆ ಇಡುವ  ಹಾಗೂ ಬೋರ್ಡ್ ಗಳನ್ನ ತೆಗೆಯುವ ವಿಚಾರದಲ್ಲಿ ಹೋಟೆಲ್ ಹನುಮಂತು ಮಾಲೀಕ ಹಾಗೂ ನ್ಯೂ ಉರೂಜ಼್ ಜೆಂಟ್ಸ್ ಕಲೆಕ್ಷನ್ ಅಂಗಡಿ ಮಾಲೀಕರ ನಡುವೆ ಗಲಾಟೆ ಶುರುವಾಗಿದೆ. ನಂತರ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ.

ಪ್ರಕರಣ ಸಂಬಂಧ 6 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದು ಗಲಾಟೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಈ ಕುರಿತು ಮಂಡಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ  ಮಾಡಲಾಗಿದೆ. ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ.

Key words: Fight for the trivial cause. 6 people Arrest…

#crimenews #mysore #fight #police