Saturday, August 22, 2026

BDA Apartments

Home Front Page ನಿವೃತ್ತಿ ಯೋಜನೆಯಲ್ಲಿ ಯುವರಾಜ್ ಸಿಂಗ್ ?!

ನಿವೃತ್ತಿ ಯೋಜನೆಯಲ್ಲಿ ಯುವರಾಜ್ ಸಿಂಗ್ ?!

ಹೊಸದಿಲ್ಲಿ, ಮೇ 20, 2019 (www.justkannada.in): ಯುವರಾಜ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಫ್ರಾಂಚೈಸಿಗಳನ್ನು ಹೊಂದಿರುವ ಲೀಗ್‌ಗಳಲ್ಲಿ ಮುಂದುವರಿಯುವುದು ಅವರ ಯೋಜನೆ ಎನ್ನಲಾಗಿದೆ. “ಯುವರಾಜ್‌ ಸಿಂಗ್‌ ಕೆಲವರಲ್ಲಿ ತಮ್ಮ ನಿವೃತ್ತಿ ಕುರಿತು ಅನೌಪಚಾರಿಕವಾಗಿ ಹೇಳಿಕೊಂಡಿದ್ದಾರೆ. ಇದನ್ನು ಅವರು ಅಧಿಕೃತವಾಗಿ ಪ್ರಕಟಿಸಲೂಬಹುದು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

2011ರ ವಿಶ್ವಕಪ್‌ ವಿಜೇತ ಭಾರತ ತಂಡದ ಹೀರೋ ಆಗಿ ಮೆರೆದಿದ್ದ ಯುವರಾಜ್‌ ಸಿಂಗ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.