Sunday, September 20, 2026

BDA Apartments

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಕಥೆ ಬರೆಯಲು ದುನಿಯಾ ವಿಜಿ ಪ್ಲಾನ್ ! BDA JK_Adv BDA Adv
Home Cinema ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಕಥೆ ಬರೆಯಲು ದುನಿಯಾ ವಿಜಿ ಪ್ಲಾನ್ !

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಕಥೆ ಬರೆಯಲು ದುನಿಯಾ ವಿಜಿ ಪ್ಲಾನ್ !

ಬೆಂಗಳೂರು, ಜೂನ್ 25, 2019 (www.justkannada.in): ನಟನೆಯಿಂದ ನಿರ್ದೇಶನಕ್ಕಿಳಿದಿರುವ ದುನಿಯಾ ವಿಜಯ್ ಹ್ಯಾಟ್ರಿಕ್ ಹೀರೊ ಶಿವಣ್ಣಗೂ ಆ್ಯಕ್ಸನ್ ಕಟ್ ಹೇಳಲು ಕಾತರಾಗಿದ್ದಾರೆ.

ತಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕೆ ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಥೆ ಉತ್ತಮವಾಗಿದ್ದರೆ ಶಿವಣ್ಣನ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಲಿದ್ದಾರೆ ವಿಜಯ್.

‘ವಿಜಿ ಉತ್ತಮ ಕಥೆ ಬರೆದರೆ ಅಭಿನಯಿಸಲು ನಾನು ರೆಡಿ. ಅವರು ಕಥೆಯನ್ನು ಚೆನ್ನಾಗಿ ಬರೆಯುತ್ತಾರೆ. ಈಗ ‘ಸಲಗ’ ಬಗ್ಗೆಯೂ ಶ್ರೀಕಾಂತ್ ಬಹಳ ಸಲ ಹೇಳಿದ್ದಾರೆ. ಹಾಗಾಗಿ ಅವರು ನನಗಾಗಿ ಒಂದು ಕಥೆ ಬರೆದರೆ ನಾನು ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ ಶಿವಣ್ಣ.