ಅಭಿಷೇಕ್ ಅಂಬರೀಶ್ ಸಂಭಾವನೆ 2 ಕೋಟಿ ರೂ. !?

ಬೆಂಗಳೂರು, ಜೂನ್ 25, 2019 (www.justkannada.in): ನಾಗಶೇಖರ್ ನಿರ್ದೇಶನದ ‘ಅಮರ್’ ಚಿತ್ರದ ಬಳಿಕ ನಟ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಮುಂದಿನ ಚಿತ್ರದತ್ತ ಗಮನ ಹರಿಸಿದ್ದಾರೆ.

ಆದರೆ ಈ ಬಾರಿ ಅಭಿಷೇಕ್ ಚಿತ್ರದ ಸಂಭಾವನೆ ವಿಷಯ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಭಿಷೇಕ್ ಚೊಚ್ಚಲ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿದ್ದರೂ ಅಭಿಷೇಕ್ ನಟನೆ ಕುರಿತು ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು.

ಈಗಾಗಲೇ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಅವರ ಕಾಲ್ ಶೀಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಆಗಸ್ಟ್ ತಿಂಗಳ ಆರಂಭದಲ್ಲಿ ಚಿತ್ರದ ಕುರಿತು ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.