ಡ್ರಗ್ಸ್ ಮಾಫಿಯಾ ನಿರೂಪಕಿ,ನಟಿ ಅನುಶ್ರೀಗೆ ಸಿಸಿಬಿ ನೋಟಿಸ್: ಇಂದು ವಿಚಾರಣೆ

ಮಂಗಳೂರು,ಸೆಪ್ಟೆಂಬರ್,25,2020(www.justkannada.in) : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ, ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಈಗಾಗಲೇ, ನಟ,ನಟಿಯರ ವಿಚಾರಣೆ ನಡೆಯುತ್ತಿದ್ದು, ಕಿರುತೆರೆ ಸೇರಿದಂತೆ ನಿರೂಪಕ, ನಿರೂಪಕಿಯರು ಮಾಫಿಯಾದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.Drugs-Mafia-narrator-actress-AnushreeCCB notice-hearing-today

ಈ ಹಿನ್ನೆಲೆಯಲ್ಲಿ ಈಗಾಗಲೇ ನಟ,ನಿರೂಪಕ ಅಕುಲ್ ಬಾಲಾಜಿ ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದು, ಅದೇ ರೀತಿಯಲ್ಲಿ ಅನುಶ್ರೀ ಅವರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಮಂಗಳೂರಿನ ಪಾಂಡೇಶ್ವರದಲ್ಲಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೊದಲ್ಲಿ ಆರೋಪಿಗಳಾದ ಕಿಶೋರ್, ತರುಣ್ ಹಾಗೂ ಅಖಿಲ್ ನೌಶಿಲ್  ಸಮ್ಮುಖದಲ್ಲಿ ವಿಚಾರಣೆ ನಡೆಸುವುದಕ್ಕೆ ಸಿದ್ಧತೆ ನಡಸಲಾಗಿದೆ.

key words : Drugs-Mafia-narrator-actress-Anushree
CCB notice-hearing-today