ಪ್ರತಿಭಟನೆ ಬೆನ್ನಲ್ಲೆ ರೈತ ಮುಖಂಡರ ಸಭೆ ಕರೆದ ಸಿಎಂ ಬಿಎಸ್ ಯಡಿಯೂರಪ್ಪ…

ಬೆಂಗಳೂರು,ಸೆಪ್ಟಂಬರ್, 25,2020(www.justkannada.in):  ಎಪಿಎಂಸಿ ಕಾಯ್ದೆ, ಭೂಸುಧಾರಣಾ ತಿದ್ಧುಪಡಿ ಕಾಯ್ದೆ ವಿರೋಧಿಸಿ ಇಂದು ರಾಜ್ಯಾದ್ಯಂತ ರೈತರು ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ಧಾರೆ. ಹಾಗೆಯೇ ಸೆಪ್ಟಂಬರ್ 28 ರಂದು ರೈತ ಸಂಘಟನೆ ಬಂದ್ ಗೆ ಕರೆ ನೀಡಿದ್ದು ಈ ಹಿನ್ನೆಲೆ ಎಚ್ಚತ್ತ ಸಿಎಂ ಬಿಎಸ್ ಯಡಿಯೂರಪ್ಪ ಮಾತುಕತೆಗೆ ಇಂದು ರೈತ ಮುಖಂಡರ ಸಭೆ ಕರೆದಿದ್ದಾರೆ.jk-logo-justkannada-logo

ರೈತರ ಪ್ರತಿಭಟನೆ ಬೆನ್ನಲ್ಲೆ ಮಾತುಕತೆಗೆ ಮುಂದಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ ಮಧ್ಯಾಹ್ನ ರೈತ ಮುಖಂಡರ ಸಭೆ ಕರೆದಿದ್ದಾರೆ.  ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಮಧ್ಯಾಹ್ನ ರೈತಮುಖಂಡರು ಭೇಟಿಯಾಗುವಂತೆ ಹೇಳಿದ್ದೇನೆ. ಭೂ ಸುಧಾರಣಾ ಕಾಯ್ದೆ ತಿದ್ಧುಪಡಿಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.cm-bs-yeddyurappa-meeting-farmer-leaders-protest

ಎಪಿಎಂಸಿ ಕಾಯ್ದೆ, ಭೂಸುಧಾರಣಾ ತಿದ್ಧುಪಡಿ ಕಾಯ್ದೆ ವಿರೋಧಿಸಿ ಇಂದು ರಾಜ್ಯದ ವಿವಿಧೆಡೆ ರೈತರು ರಸ್ತೆ ತಡೆ ನಡೆಸಿ ಧರಣಿ ನಡೆಸಿದ್ದಾರೆ. ಈ ಮಧ್ಯೆ ಸೆಪ್ಟಂಬರ್ 28 ರಂದು ರೈತ ಸಂಘಟನೆಗಳು ರಾಜ್ಯದಲ್ಲಿ ಬಂದ್ ಗೆ ಕರೆ ನೀಡಿದ್ದು ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

Key words: CM BS Yeddyurappa – meeting –farmer- leaders – protest.