Monday, August 3, 2026

BDA Apartments

Home Front Page ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳನ್ನು ಬಂದ್ ಮಾಡಿ ರೈತರ ಶಕ್ತಿ ಪ್ರದರ್ಶನ- ಕುರುಬೂರು ಶಾಂತಕುಮಾರ್…

ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳನ್ನು ಬಂದ್ ಮಾಡಿ ರೈತರ ಶಕ್ತಿ ಪ್ರದರ್ಶನ- ಕುರುಬೂರು ಶಾಂತಕುಮಾರ್…

ಬೆಂಗಳೂರು, ಸೆಪ್ಟಂಬರ್, 25,2020(www.justkannada.in):  ಎಪಿಎಂಸಿ, ಭೂಸುಧಾರಣಾ ತಿದ್ಧುಪಡಿ ಕಾಯ್ದೆ ವಿರೋಧಿಸಿ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಈ ಮೂಲಕ ಸರ್ಕಾರಕ್ಕೆ ಬಿಸಿ ತೋರಿಸಿ ,ರೈತರ ಶಕ್ತಿ ಪ್ರದರ್ಶಿಸುತ್ತೇವೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ಬಗ್ಗೆ ಮಾತನಾಡಿದ ಕುರುಬುರು ಶಾಂತಕುಮಾರ್, ಇವತ್ತು  ರಾಜ್ಯ ಹಾಗೂ ರಾಷ್ಟ್ರ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಸರ್ಕಾರಕ್ಕೆ ಬಿಸಿ ತೋರಿಸಿ, ರೈತರ ಶಕ್ತಿ ಪ್ರದರ್ಶಿಸುತ್ತೇವೆ. 34 ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ. ಈಗಲಾದ್ರೂ ಕನಿಷ್ಠ ಸೌಜನ್ಯಕ್ಕೆ ರೈತ ಜೊತೆ ಸರ್ಕಾರ ಮಾತಾಡಬೇಕು. ಮಸೂದೆ ಪಾಸ್ ಆಗಲ್ಲ ಅಂತ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ ಎಂದು ಹೇಳಿದರು.

ರಸ್ತೆ ತಡೆ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ಇಲ್ಲ. ನಮ್ಮ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಅನ್ನದಾತನಿಗೆ ವಿರೋಧ ಮಾಡಿದ್ರೆ ದೇಶದ ಜನತೆಗೆ ದ್ರೋಹ ಬಗೆದಂತೆ. ಪಾದಯಾತ್ರೆ ಇಲ್ಲ, ಎಲ್ಲರೂ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಸೇರುತ್ತೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Key words: power – farmers – highways-bandh- protest- Kuruburu Shanthakumar.