Sunday, September 20, 2026

BDA Apartments

ಎದೆಯ ಮೇಲೆ ಡಾ.ಸುಧಾಮೂರ್ತಿ ಅವರ ಟ್ಯಾಟು ಹಾಕಿಸಿಕೊಂಡ ಅಭಿಮಾನಿ… BDA JK_Adv BDA Adv
Home Front Page ಎದೆಯ ಮೇಲೆ ಡಾ.ಸುಧಾಮೂರ್ತಿ ಅವರ ಟ್ಯಾಟು ಹಾಕಿಸಿಕೊಂಡ ಅಭಿಮಾನಿ…

ಎದೆಯ ಮೇಲೆ ಡಾ.ಸುಧಾಮೂರ್ತಿ ಅವರ ಟ್ಯಾಟು ಹಾಕಿಸಿಕೊಂಡ ಅಭಿಮಾನಿ…

ಮೈಸೂರು,ಆ,19,2019(www.justkannada.in🙂 ಸಾಮಾನ್ಯವಾಗಿ ಸಿನೆಮಾ ನಟರನ್ನು, ರಾಜಕೀಯದವ್ರನ್ನ, ಕ್ರಿಕೆಟ್ ದಿಗ್ಗಜರನ್ನ, ಸೆಲೆಬ್ರಿಟಿಗಳ ಟ್ಯಾಟೂ ಹಾಕಿಸಿಕೊಂಡು ಸಂಭ್ರಮ ಪಡೋರನ್ನ ನೋಡಿದ್ದ ನಮಗೆ ಮೈಸೂರಿನ ಈ ಯುವಕ‌ ಡಿಫರೆಟ್ ಆಗಿ ಕಂಡಿದ್ದಾನೆ. ಹೌದು ಮಮಕಾರ ಮೂರ್ತಿ‌, ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರನ್ನ ಉಸಿರಾಗಿಸಿಕೊಂಡ ಮೈಸೂರು ಯುವಕನೊಬ್ಬ ಎದೆಯಲ್ಲಿ  ಅವರ ಟ್ಯಾಟು ಹಾಕಿಸಿಕೊಂಡು ತನ್ನ ಅಭಿಮಾನ ತೋರ್ಪಡಿಸಿದ್ದಾನೆ.

ಇಂದು ಇನ್ಫೋಸಿಸ್ ಅಧ್ಯಕ್ಷೆ  ಡಾ. ಸುಧಾಮೂರ್ತಿ ಅವರ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆ ಮೈಸೂರಿನ ಜೆಸಿ ನಗರದ ನಿವಾಸಿ ಲೋಕೇಶ್,  ಚಾಮುಂಡಿ ಬೆಟ್ಟಕ್ಕೆ ಬರಿಗಾಲಲ್ಲಿ ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಎದೆಯಲ್ಲಿ ಸುಧಾಮೂರ್ತಿ ಅವರ ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನ ತೋರುತ್ತಿದ್ದಾರೆ. ತನ್ನ ತಾಯಿಯಂತಯೇ ಸುಧಾಮೂರ್ತಿಯರನ್ನ ಪ್ರೀತಿಸುವ ಮೈಸೂರಿನ ಜೆಸಿ ನಗರದ ನಿವಾಸಿ ಲೋಕೇಶ್, ತನ್ನ ಬಲಗೈ ಮೇಲೆ ಮತ್ತು ಎದೆಯಲ್ಲಿ ಸುಧಾಮೂರ್ತಿಯವರ ಟ್ಯಾಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ.

ನಾನು ಅತಿಯಾಗಿ ಪ್ರೀತಿಸುವ ನನ್ನ ಅಮ್ಮ ನಂತೆಯೇ ಸುಧಾಮೂರ್ತಿಯವರನ್ನ ಪ್ರೀತಿಸ್ತಿನಿ. ಅವ್ರೇ ನಂಗೇ ಸ್ಪೂರ್ತಿ. ಅವ್ರಿಗಿರೋ ಸಮಾಜದ ಕಾಳಜಿ, ಪ್ರತಿಯೊಬ್ಬರನ್ನ ಪ್ರೀತಿಸುವ ಗುಣ, ಕಷ್ಟದಲ್ಲಿರುವರಿಗೆ ನೆರವಾಗುವುದು, ಅದ್ರಲ್ಲೂ ಸಾವಿರಾರು ಕೋಟಿಯ ಒಡತಿಯಾಗಿದ್ರೂ ಕೂಡ ಅವರ ಸರಳತೆ ಇದೆಲ್ಲಾ ನನಗೆ ಸ್ಪೂರ್ತಿ ಎನ್ನುತ್ತಾರೆ ಲೋಕೇಶ್.

Key words: Dr. Sudhamoorthy’s- tattoo- fan -his chest-mysore