Sunday, August 23, 2026

BDA Apartments

Home Cinema ಕೆಜಿಎಫ್-2 ಚಿತ್ರೀಕರಣಕ್ಕಾಗಿ ಮೈಸೂರಿಗೆ ‘ಅಧೀರ’ ನ ಆಗಮನವಾಗಲಿದೆ..!

ಕೆಜಿಎಫ್-2 ಚಿತ್ರೀಕರಣಕ್ಕಾಗಿ ಮೈಸೂರಿಗೆ ‘ಅಧೀರ’ ನ ಆಗಮನವಾಗಲಿದೆ..!

 

ಮೈಸೂರು, ಆ.19, 2019 : (www.justkannada.in news) ಬಹುಭಾಷೆಯಲ್ಲಿ ಬಿಡುಗಡೆಗೊಂಡು ಧೂಳ್ ಎಬ್ಬಿಸಿದ ರಾಕಿಬಾಯ್ ಯಶ್ ಅಭಿನಯದ ಕೆಜಿಎಫ್ -2 ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಪಾರ್ಟ್ 2 ನಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್ ‘ಅಧೀರ’ನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಮೈಸೂರಿನ ಲಲಿತ ಮಹಲ್‌ ಪ್ಯಾಲೇಸ್ ಹೋಟೆಲ್‌ನಲ್ಲಿ ಒಂದು ವಾರಗಳ ಕಾಲ ಸಂಜಯ್ ದತ್ ಅಭಿನಯಿಸುವ ‘ಅಧೀರ’ನ ಪಾತ್ರದ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಈ ಸಲುವಾಗಿಯೇ ಸದ್ಯದಲ್ಲೇ ನಟ ಸಂಜಯ್‌ ದತ್ ಅವರು ಕೆಜಿಎಫ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದಕ್ಷಿಣ ಭಾರತದ ಹೆಸರಾಂತ ನಟರ ಸಿನಿಮಾಗಳು ಹಾಗೂ ಬಾಲಿವುಡ್ ನಟರ ಸಿನಿಮಾಗಳು ಸಹ ಈಗಾಗಲೇ ಲಲಿತಮಹಲ್ ಪ್ಯಾಲೆಸ್ ನಲ್ಲಿ ಶೂಟಿಂಗ್ ನಡೆಸಿವೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ಸಂಜಯ್ ದತ್.
ಇದರ ಜತೆಜತೆಗೆ ‘ವಡಾ ಚೆನ್ನೈ’ ಮತ್ತು ‘ಸಗಾ’ ತಮಿಳು ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಟ ಸರಣ್‌ ಶಕ್ತಿ ಕೂಡ ‘ಕೆಜಿಎಫ್‌ ಚಾಪ್ಟರ್‌ 2’ ನಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ರಾಕಿ ಬಾಯ್‌(ಯಶ್‌)ನ ಹದಿಹರೆಯದ ಕಥೆ ಇದೆ ಎನ್ನಲಾಗಿದೆ. ಈ ಪಾತ್ರದಲ್ಲಿ ಸರಣ್‌ ಕಾಣಿಸಿಕೊಳ್ಳುತ್ತಿದ್ದಾರೆ.

 

key words : mysore-KGF-2-kannada-film-sanjay.datt-bollywood